ಪಿಎಸ್ಆಯ್ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ ಆರೋಪಿ.ಸಿನಿಮೀಯ ರೀತಿಯಲ್ಲಿ ಆರೋಪಿ ಆರೆಸ್ಟ್.
ಹುಬ್ಬಳ್ಳಿ:-ನಿನ್ನೆ ನಡೆದ ಪೈರಿಂಗ್ ಪ್ರಕರದಲ್ಲಿ ಶಹರ ಪೋಲೀಸ ಠಾಣೆಯ ಪಿಎಸ್ಆಯ್ ವಿನೋದ ದೊಡ್ಡಲಿಂಗಪ್ಪನವರ ಮತ್ತು ಅವರ ಟೀಮ್ ಆರೋಪಿಯನ್ನ ನಿನ್ನೆ ಮದ್ಯಾಹ್ನ ಆರೆಸ್ಟ್ ಮಾಡಿದ್ದರು.
ಆರೆಸ್ಟ್ ಮಾಡಿದ ಸಿಸಿಟಿವಿ ವಿಡಿಯೋ…
ನಂತರ ಸಾಯಂಕಾಲ ಸ್ಥಳ ಮಹಜರು ಮಾಡಲು ಆರೋಪಿಯನ್ನು ಕರೆತಂದಾಗ ಆರೆಸ್ಟ್ ಮಾಡಿದ್ದ ಪಿಎಸ್ಆಯ್ ಮೇಲೆ ಸೇಡು ತೀರಿಸಿಕೊಳ್ಳಲು ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದರ ಹಿನ್ನೆಲೆಯಲ್ಲಿ ಪೈರಿಂಗ್ ಮಾಡಲಾಗಿದೆ.
ಯಾರೋ ಒಬ್ಬರಿಗೆ ರೌಡಿ ಸತೀಶ ನಿನ್ನ ಮಡ್೯ರ್ ಮಾಡ್ತೇನಿ ಅಂತಾ ಪೋನಿನಲ್ಲಿ ಅವಾಜ್ ಹಾಕಿ ನಂತರ ಕೈಯಲ್ಲಿ ಮಚ್ಚು ಹಿಡಿದು ಗದಗ ರಸ್ತೆಯ ರೇಲ್ವೇ ಬ್ರಿಡ್ಜ್ ಬಳಿ ವ್ಯಕ್ತಿಗಾಗಿ ಹೊಂಚು ಹಾಕಿ ಕುಳಿತಿದ್ದ ನಟೋರಿಯಸ್ ನನ್ನು ಮಾಹಿತಿ ತಿಳಿದ ಪಿಎಸ್ಆಯ್ ಸಿನಿಮೀಯ ರೀತಿಯಲ್ಲಿ ಆರೆಸ್ಟ್ ಮಾಡಿದ್ದರು.
ಸದ್ಯ ಪಿಎಸ್ಆಯ್ ವಿನೋದ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ.