ಹಿಂದೂ ಮಸ್ಲಿಂ ವಿವಾಹದಲ್ಲಿ ಶಾಸಕ ಅರವಿಂದ ಬೆಲ್ಲದ ಭಾಗಿ ಭಜರಂಗದಳ ಗಪ್ ಚುಪ್..

Share to all

ಹಿಂದೂ ಮಸ್ಲಿಂ ವಿವಾಹದಲ್ಲಿ ಶಾಸಕ ಅರವಿಂದ ಬೆಲ್ಲದ ಭಾಗಿ ಭಜರಂಗದಳ ಗಪ್ ಚುಪ್..

ಧಾರವಾಡ:-ಧಾರವಾಡದ ಸತ್ತೂರ ಬಡಾವಣೆಯ ಹೊಟೆಲ್ಲೊಂದರಲ್ಲಿ ನಡೆದ ಹಿಂದೂ ಮುಸ್ಲಿಂ ವಿವಾಹದಲ್ಲಿ ಶಾಸಕ ಅರವಿಂದ ಬೆಲ್ಲದ ಭಾಗಿಯಾಗಿ ಕೆಲವರಿಗೆ ಇರಿಸು ಮುರಿಸು ಉಂಟಾದರೆ ಇನ್ನೂ ಕೆಲವರಿಗೆ ಶಾಸಕರ ನಡೆ ಮೆಚ್ಚುಗೆಯಾಗಿದೆ.

ಧಾರವಾಡ ಹೊಸ ಯಲ್ಲಾಪುರ ನಿವಾಸಿಗಳಾದ ಹಿಂದೂ ಹುಡುಗಿ ವಚನಾ ಹಾಗೂ ಮುಸ್ಲಿಂ ಯುವಕ ಅದೀಬ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತದ್ದರು.ಆ ಹಿನ್ನೆಲೆಯಲ್ಲಿ ಮದುವೆಯಾಗಿದ್ದಾರೆ.

ಹಿಂದೂ ಮುಸ್ಲಿಂ ವಿಚಾರ ಭಜರಂಗದಳದ ಕಾರ್ಯಕರ್ತರಿಗೆ ತಿಳಿಯುತ್ತಿದ್ದಂತೆ ಅಲಟ್೯ ಆಗಿ ಯುವತಿಯ ಮನೆಗೆ ಹೋಗಿ ವಿಚಾರಿಸಿದ್ದರು ಎನ್ನಲಾಗಿದೆ.ಆದರೆ ಅದೇ ಮದುವೆಗೆ ಶಾಸಕ ಅರವಿಂದ ಬೆಲ್ಲದ ಭಾಗಿಯಾಗಿರೋದು ಭಜರಂಗದಳದ ಕಾರ್ಯಕರ್ತರಿಗೆ ಇರಿಸು ಮುರುಸು ಉಂಟಾಗಿ ಗಪ್ ಚುಪ್ ಆಗಿದ್ದಾರೆ..

ಏನೇ ಆಗಲಿ ಈಗ ಶಾಸಕ ಅರವಿಂದ ಬೆಲ್ಲದ ಅವರ ಇಂತಹ ಮದುವೆಯಲ್ಲಿ ಭಾಗಿಯಾಗಿ ಸಮಾಜಕ್ಕೆ ನಾವೆಲ್ಕರೂ ಒಂದೇ ಎನ್ನುವ ಸಂದೇಶ ಸಾರಿದ್ದಾರೆ ಎನ್ನಬಹುದು.

ಉದಯ ವಾರ್ತೆ
ಧಾರವಾಡ


Share to all

You May Also Like

More From Author