ನೂತನ ಕಮೀಷನರ್ ಅಧಿಕಾರಿಗಳಿಗೆ ಸೈಲೆಂಟ್ ಡೈರೆಕ್ಷನ್… ಪುಲ್ ಆ್ಯಕ್ಟಿವ್ ಆದ ಹುಬ್ಬಳ್ಳಿ ಪೊಲೀಸರು.ಪ್ರತಿಷ್ಠಿತ ಹೊಟೆಲ್ ಗಳ ಮೇಲೆ ದಿಡೀರ ದಾಳಿ.
ಹುಬ್ಬಳ್ಳಿ:- ನೂತನ ಕಮೀಷನರ್ ಅಧಿಕಾರಿಗಳಿಗೆ ಸೈಲೆಂಟ್ ಡೈರೆಕ್ಷನ್…ನೀಡಿದ ಬೆನ್ನಲ್ಲೇ
ಪುಲ್ ಆ್ಯಕ್ಟಿವ್ ಆದ ಹುಬ್ಬಳ್ಳಿ ಪೊಲೀಸರು.ಹುಬ್ಬಳ್ಳಿಯ ಗೋಕುಲ ರಸ್ತೆಯ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ಐಸ್ ಕ್ಯೂಬ್ ಹಾಗೂ ಬಾಂಬೆ 63 ಹೋಟೆಲ್‌ಗಳ ಮೇಲೆ ಪೊಲೀಸರ ದಾಳಿ ನಡೆಸಿ
ವೀಕೆಂಡ್ ಪಾರ್ಟಿ ಹೆಸರಿನಲ್ಲಿ ತಡರಾತ್ರಿವರೆಗೂ ನಡೆಯುತ್ತಿದ್ದ ಚಟುವಟಿಕೆಗಳ ಬಗ್ಗೆ ಬಂದ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.
ಡಿಸಿಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ
ಪೊಲೀಸರ ತಂಡ ಹೋಟೆಲ್‌ಗೆ ಎಂಟ್ರಿ ಕೊಡುತ್ತಿದ್ದಂತೆ, ಅಲ್ಲಿದ್ದ ಕೆಲವರು ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದ್ದು
ಇಷ್ಟು ದಿನ ತಡರಾತ್ರಿವರೆಗೂ ಸದ್ದು ಮಾಡುತ್ತಿದ್ದ ಪ್ರತಿಷ್ಠಿತ ಹೋಟೆಲ್‌ಗಳ ಸದ್ದನ್ನು ಪೋಲೀಸರ ನಿಲ್ಲಿಸಿದ್ದಾರೆ.
ಈ ಪೊಲೀಸರ ದಾಳಿ ಇದು ಕಾಟಾಚಾರಕ್ಕಾ ಅಥವಾ ಹೀಗೆ ಮುಂದುವರೆಯುತ್ತಾ ಕಾದು ನೋಡ ಬೇಕಾಗಿದೆ.