ಬಡವರ ಹೊಟ್ಟೆ ಸೇರಬೇಕಾದ ಅನ್ನಭಾಗ್ಯ ಲಾರಿ ಪೋಲೀಸ ಠಾಣೆಯಲ್ಲಿ..ಖದೀಮರ ಹೆಡಮುರಿ‌ ಕಟ್ಟತಾರಾ ಕುಂದಗೋಳ ಪೋಲೀಸರು..?

Share to all

ಬಡವರ ಹೊಟ್ಟೆ ಸೇರಬೇಕಾದ ಅನ್ನಭಾಗ್ಯ ಲಾರಿ ಪೋಲೀಸ ಠಾಣೆಯಲ್ಲಿ..ಖದೀಮರ ಹೆಡಮುರಿ‌ ಕಟ್ಟತಾರಾ ಕುಂದಗೋಳ ಪೋಲೀಸರು..?

ಕುಂದಗೋಳ:- ಕುಂದಗೋಳ ತಾಲೂಕಿನಲ್ಲಿ ಸರಕಾರದ ಮಹತ್ವಾಕಾಂಕ್ಷೆ ಯೋಜನೆ ಅನ್ನಭಾಗ್ಯದ ಅಕ್ಕಿಯ ಲಾರಿ ಈಗ ಕುಂದಗೋಳ ಪೋಲೀಸ ಠಾಣೆಯ ಮೆಟ್ಟಿಲೇರಿದೆ..ಈಗ ಪೋಲೀಸರು ಯಾವ ರೀತಿ ಕ್ರಮ ಕೈಕೊಳ್ಳತಾರೆ ಅನ್ನೋದು ನಿಗೂಢ ಪ್ರಶ್ನೆ.

ಹೌದು ನಿನ್ನೆ ಹಾಡುಹಗಲೇ ರಾಜಾ ರೋಷವಾಗಿ ಅನ್ನಭಾಗ್ಯದ ಅಕ್ಕಿ ಮತ್ತು ಗೋದಿಯನ್ನು ತುಂಬಿಕೊಂಡು ಕುಂದಗೋಳ ಕಡೆಯಿಂದ ಲಕ್ಷ್ಮೇಶ್ವರದ ಕಡೆ ಹೊರಟಿದ್ದ ಅನ್ನಭಾಗ್ಯದ ಅಕ್ಕಿ ಲಾರಿಯನ್ನು ಸಂಶಿ ಬಳಿ ಗ್ರಾಮಸ್ಥರೇ ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ..

ಸಂಶಿಯಿಂದ ಅಕ್ರಮವಾಗಿ ಸಾಗಿಸುತ್ತಿದ್ದರು ಎನ್ನಲಾದ ಅಕ್ಕಿಯ ಲಾರಿ ಸರಳವಾಗಿ ಕುಂದಗೋಳ ಪೋಲೀಸ ಠಾಣೆಗೆ ಹೋಗಿದೆ.ಆದರೆ ಅಲ್ಲಿಂದ ಮುಂದೆ ನಡೆದಿರುವುದು ಏನೂ..ಪೋಲೀಸರು ಯಾವ ಕ್ರಮಕೈಕೊಂಡರು..ಆಹಾರ ಮತ್ತು ನಾಗರಿಕ ಪೋರೈಕೆ ಇಲಾಖೆಯ ಅಧಿಕಾರಿಗಳು ಯಾರ ವಿರುದ್ದ ದೂರು ನೀಡಿದರು..ರಾತ್ರೋ ರಾತ್ರಿ ನಡೆದ ಹೈ ಡ್ರಾಮಾ ಏನು ಎಲ್ಲವನ್ನೂ ವೀಕ್ಷಿಸಿ ನಿಮ್ಮ ಉದಯ ವಾರ್ತೆಯಲ್ಲಿ.

ಉದಯ ವಾರ್ತೆ
ಕುಂದಗೋಳ.


Share to all

You May Also Like

More From Author