ಕುಂದಗೋಳ ಅನ್ನಭಾಗ್ಯ ಅಕ್ಕಿ ಪ್ರಕರಣ…38 ಘಂಟೆ ಕಳೆದರೂ ದಾಖಲಾಗಿಲ್ಲಾ “FIR”

Share to all

ಕುಂದಗೋಳ ಅನ್ನಭಾಗ್ಯ ಅಕ್ಕಿ ಪ್ರಕರಣ…38 ಘಂಟೆ ಕಳೆದರೂ ದಾಖಲಾಗಿಲ್ಲಾ “FIR”

ಕುಂದಗೋಳ:- ನಿನ್ನೆ ಕುಂದಗೋಳದ ಸಂಶಿ ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿಯ ಗಾಡಿಯನ್ನು ಸ್ವತ: ಗ್ರಾಮಸ್ಥರೇ ಹಿಡಿದು ಪೋಲೀಸರಿಗೆ ಒಪ್ಪಿಸಿ 38 ಘಂಟೆ ಕಳೆದರೂ ಈವರೆಗೂ ಕುಂದಗೋಳ ಪೋಲೀಸ ಠಾಣೆಯಲ್ಲಿ ದೂರು ದಾಖಲಾಗಿಲ್ಲಾ…

ದೂರು ದಾಖಲಿಸಬೇಕಾದ ಆಹಾರ ಇಲಾಖೆಯ ಅಧಿಕಾರಿಗಳು ಇನ್ನೂ ನಿದ್ರೆಯಲ್ಲಿದ್ದಾರಾ ಅಥವಾ ಅವರಿಗೆ ಯಾರದಾದರೂ ಒತ್ತಡ ಇದೆಯಾ..ಆದರೆ ಅಕ್ರಮವಾಗಿ ಸಾಗಿಸಲಾಗಿತ್ತು ಎನ್ನಲಾದ ಅನ್ನಭಾಗ್ಯದ ಅಕ್ಕಿಯ ಗಾಡಿಯನ್ನ ಗ್ರಾಮಸ್ಥರೇ ಹಿಡಿದು ಕೊಟ್ಟರೂ ಕೇಸ್ ದಾಖಲಿಸದ ಅಧಿಕಾರಿಗಳಿಗೆ ಏನೇನ್ನಬೇಕು..

ಅಕ್ರಮವಾಗಿ ಸಾಗಿಸುಲಾಗುತ್ತಿದ್ದ ಅಕ್ರಮ ದಂಧೆಕೋರರು ಮಾತ್ರ ನಾವು ಎಲ್ಲೆಲ್ಲಿ ಏನು ಪ್ರಸಾದ ಕೊಡಬೇಕು ಅದನ್ನ ತಿಂಗಳಾ ತಿಂಗಳು ಮುಟ್ಟಿಸುತ್ತೇವೆ.ಅದಕ್ಕೆ ನಾವ್ಯಾಕೆ ಹೆದರಬೇಕು.ಅಧಿಕಾರಿಗಳು ಏನು ಮಾಡತಾರೆ ನೋಡೋಣ ಅನ್ನೋ ಮಾತುಗಳು ದಂಧೆಕೋರರಿಂದ ಕೇಳಿ ಬರತಿವೆ..

ಕಳೆದ ಹಲವು ವರ್ಷಗಳಿಂದ ತಾಲೂಕಿನ ಗೋಡೌನಿಂದಲೇ ಅಕ್ರಮವಾ ಅನ್ನಭಾಗ್ಯ ಅಕ್ಕಿ ಸಾಗಾಟದ ಕಿಂಗ್ ಪಿನ್ “ಸುಬ್ಬನ” ಇಂಚಿಂಚೂ ಮಾಹಿತಿಯನ್ನ ಬಿಚ್ಚಿಡಲಿದೆ ನಿಮ್ಮ ಉದಯ ವಾರ್ತೆ.

ಉದಯ ವಾರ್ತೆ
ಕುಂದಗೋಳ


Share to all

You May Also Like

More From Author