ಸದಾ ಹಸನ್ಮುಖಿ ಪಾಲಿಕೆಯ ಅಸಿಸ್ಟಂಟ್ ಕಮೀಷನರ್ ವಿಜಯಕುಮಾರ್ ಗೆ ರಾಜ್ಯಮಟ್ಟದ ವಿ.ಕೆ ಎಕ್ಸಲೆನ್ಸ್ ಆ್ಯಂಡ್ ಆನರ್ ಪ್ರಶಸ್ತಿ..

Share to all

ಸದಾ ಹಸನ್ಮುಖಿ ಪಾಲಿಕೆಯ ಅಸಿಸ್ಟಂಟ್ ಕಮೀಷನರ್ ವಿಜಯಕುಮಾರ್ ಗೆ ರಾಜ್ಯಮಟ್ಟದ ವಿ.ಕೆ ಎಕ್ಸಲೆನ್ಸ್ ಆ್ಯಂಡ್ ಆನರ್ ಪ್ರಶಸ್ತಿ..

ಹುಬ್ಬಳ್ಳಿ:- ಅವರ ಬಳಿ ಯಾರೇ ಹೋಗಲಿ ನಗು ನಗುತಾ ಬನ್ರೀ ..ನೀರು ಕುಡಿರೀ..ಚಹಾ ಕುಡಿರೀ ಅಂತಾ ಬಂದವರ ಯೋಗ ಕ್ಷೇಮ ಒಂದು ಕಡೆ ವಿಚಾರಿಸುತ್ತಲೇ ತಮ್ಮ ಕೆಲಸದ ಕಡೆಗೆ ಗಮನ ಕೊಡುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಾ ಹಸನ್ಮುಖಿ ವಿಜಯಕುಮಾರ್ ಆರ್ ಅವರ ಎಂಜನೀಯರಿಂಗ್ ಮತ್ತು ಮೂಲ ಸೌಕರ್ಯ ಕ್ಷೇತ್ರದಲ್ಲಿನ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಪ್ರತಿಷ್ಠಿತ ರಾಜ್ಯಮಟ್ಟದ ವಿ.ಕೆ ಎಕ್ಸಲೆನ್ಸ್ ಆ್ಯಂಡ್ ಆನರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

 

ಅವಳಿ ನಗರದಲ್ಲಿ ಅಭಿವೃದ್ಧಿ ವಿಷಯ ಅಂತಾ ಬಂದರೆ ಜನಪ್ರತಿನಿಧಿಗಳಿರಲಿ ಪಾಲಿಕೆಯ ಆಯುಕ್ತರಿರಲಿ ವಿಜಯಕುಮಾರಗೆ ಪೋನ್ ಹಚ್ಚರಿ ಅನ್ನೋ ಲೇವಲ್ ಗೆ ಕೆಲಸ..ಕೆಲಸ ಅನ್ನೋ ವ್ಯಕ್ತಿಯನ್ನ ವಿ.ಕೆ ಆ್ಯಂಡ್ ಟೈಮ್ಸ್ ಆಪ್ ಇಂಡಿಯಾ ಗ್ರುಪ್ ಗುರುತಿಸಿ ರಾಜ್ಯಮಟ್ಟದ ಅವಾಡ್೯ ನೀಡಿರುವುದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಹೆಮ್ಮೆಯೇ ಸರಿ.

ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಪಾಲಿಕೆಯ ವಿರುದ್ದ ಪ್ರತಿಭಟನೆಗಳು ನಡೆಯಲಿ,ಅಭಿವೃದ್ಧಿ ವಿಚಾರದಲ್ಲಿ ಸಮಸ್ಯೆ ಆಗಲಿ ಅಲ್ಲಿ‌ ಮೊದಲು ಕಾಣುವದೇ ವಿಜಯಕುಮಾರ ಸರ್. ಅವರು ಎಲ್ಲರನ್ನೂ ನಗು ನಗುತಾ ಬನ್ರೀ ನಾನು ನಿಮ್ಮ ಕೆಲಸ ಮಾಡಿಕೊಡತೇನಿ ಅನ್ನುತ್ತಲೇ ಅವರ ಕೆಲಸ ಆಗಲೇ ಪೋನಿನಲ್ಲೇ ಅವರ ಅರ್ಧ ಕೆಲಸ ಮುಗಿದೇ ಹೋಗುತ್ತೆ.ಅಂತಹ ಹಗಲಿರುಳಿ‌ ಕೆಲಸ..ಕೆಲಸ ಅನ್ನೋ ಸದಾ ಹಸನ್ಮುಖಿ ವಿಜಯಕುಮಾರ ಅವರಿಗೆ ಇನ್ನಷ್ಟು ರಾಜ್ಯ,ರಾಷ್ಟ ಮಟ್ಟದ ಪ್ರಶಸ್ತಿಗಳು ಒಲಿದು ಬರಲಿ ಅನ್ನೋದು ನಮ್ಮ ಕಳಕಳಿಯೂ ಕೂಡಾ..ಹ್ಯಾಂಡ್ಸ್ ಅಪ್ ಸರ್..

ಅವರಿಗೆ ಒಲಿದು ಬಂದ ರಾಜ್ಯಮಟ್ಟದ ಈ ಪ್ರಶಸ್ತಿಯನ್ನು ಅವರ ತಾಯಿ ದಿ:ಸುವರ್ಣಾಬಾಯಿ ತಂದೆ ರಾಮಾನಾಯಕ ಹಾಗೂ ಪತ್ನಿ ನಂದಿತಾ ಅವರಿಗೆ ಸಮರ್ಪಿಸಿರುವುದು ಹಾಗೂ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ನನಗೆ ಕೇವಲ ಕರ್ತವ್ಯದ ಸ್ಥಳವಲ್ಲ ನನ್ನ ವೃತ್ತಿಜೀವನವನ್ನು ರೂಪಿಸಿದ ಕರ್ಮಭೂಮಿ.ಇಲ್ಲಿನ ಜನತೆಯ ವಿಶ್ವಾಸ,ಜನಪ್ರತಿನಿಧಿಗಳ ಸಹಕಾರ,ಸಹೋದ್ಯೋಗಿಗಳ ಪರಿಶ್ರಮವೇ ನನ್ನ ಈ ಸಾಧನೆಗೆ ಶಕ್ತಿ.ಈ ಪ್ರಶಸ್ತಿಯನ್ನು ವೈಕ್ತಿಕ ಸಾಧನೆಯಂದು ಭಾವಿಸದೇ ಹುಬ್ಬಳ್ಳಿ-ಧಾರವಾಡ ಜನತೆಗರ ಇನ್ನಷ್ಟು ಬದ್ಧತೆ,ಪ್ರಾಮಾಣಿಕ ಸೇವೆ ಸಲ್ಲಿಸುವ ಜಾವಾಬ್ದಾರಿಯಾಗಿ ಸ್ವೀಕರಿಸುತ್ತೇನೆ ಅಂತಾ ವಿಜಯಕುಮಾರ ಅವರು ಹೇಳಿರುವುದು ಅವರ ದೊಡ್ಡತನವನ್ನು ಎತ್ತಿ ತೋರಿಸುತ್ತದೆ. ಮತ್ತೊಮ್ಮೆ ಉದಯ ವಾರ್ತೆಯಿಂದ ಧನ್ಯವಾದಗಳು ಸರ್…

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author