ಹುಬ್ಬಳ್ಳಿಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪುಲ್ ಡ್ಯಾನ್ಸ್..ಹುಬ್ಬಳ್ಳಿ ಜನರ ಜೋಶ್ ಸೂಪರ್ ಎಂದ ಶಿಲ್ಪಾ ಶೆಟ್ಟಿ..
ಹುಬ್ಬಳ್ಳಿ:-ಕರ್ನಾಟಕದ ಹುಡುಗಿ ಬಾಲಿವುಡ್‌ನಲ್ಲಿ ಹೆಸರು ಮಾಡಿರುವ ನಟಿ ಶಿಲ್ಪಾ ಶೆಟ್ಟಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದು ಖಾಸಗಿ ಹೊಟೆಲ್ ನಲ್ಲಿ ನವರಾತ್ರಿ ಅಂಗವಾಗಿ ಆಯೋಜಿಸಿದ್ದ ದಾಂಡಿಯಾ ನೃತ್ಯದಲ್ಲಿ ಭಾಗವಹಿಸಿ ಗರ್ಭಾ ಡ್ಯಾನ್ಸ್ ಗೆ ಸಖತ್ ಡ್ಯಾನ್ಸ್ ಮಾಡಿ ಹುಬ್ಬಳ್ಳಿ ಜನರ ಮನಸ್ಸು ಗೆದ್ದಿದ್ದಾರೆ.
ಕಾರ್ಯಕ್ರಮಕ್ಕೂ ಮೊದಲು ಮಾತನಾಡಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಾನು ಕರ್ನಾಟಕದ ಹೆಣ್ಣು ಮಗಳು ಎಂಬ ಹೆಮ್ಮೆ ಇದೆ.ನಾನು ಬಂಟ ಸಮುದಾಯದವಳು ಕರ್ನಾಟಕದ ಸಂಸ್ಕ್ರತಿಯ ಬಗ್ಗೆ ಹೆಮ್ಮೆ ಇದೆ.ದೇವರಿಗಾಗಿ ಮನಸ್ಸು ತುಂಬಿ ನೃತ್ಯ ಮಾಡಬೇಕು.ನೃತ್ಯಕ್ಕೆ ಭಾಷೆಯಿಲ್ಲಾ.ಅದೊಂದು ಭಾವನೆ.ನಾನು ದೇವಿಯ ಪರಮ ಭಕ್ತೆ.ಹುಬ್ಬಳ್ಳಿಯ ಸಂಬ್ರಮ ನೋಡಿ ಸಂತೋಷವಾಯಿತು ಎಂದಿದ್ದಾಳೆ