ಗನ್ ತೋರಿಸಿ ಬೆದರಿಕೆ..ರೌಡೀಸಂ..ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯಲ್ಲಿ FIR..ಪೋಲೀಸರ ಮೌನ..?

Share to all

ಗನ್ ತೋರಿಸಿ ಬೆದರಿಕೆ..ರೌಡೀಸಂ..ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯಲ್ಲಿ FIR..ಪೋಲೀಸರ ಮೌನ..?

ಹುಬ್ಬಳ್ಳಿ:- ಹುಬ್ಬಳ್ಳಿಯ ಬೆಂಡಿಗೇರಿ ಪೋಲೀಸ ಠಾಣೆಯಲ್ಲಿ ನ್ಯಾಯಾ ಕೇಳಿ ಹೋದರೆ ನ್ಯಾಯ ಸಿಗತ್ತಾ ಅನ್ನೋ ನಂಬಿಕೆಯನ್ನೇ ಜನರು ಕಳೆದುಕೊಂಡರಾ ಅನ್ನೋ ಅನುಮಾನ ಸಹಜವಾಗಿಯೇ ಮೂಡಿ ಬರತಾ ಇದೆ..ಈ ಹಿಂದೆ ಒರ್ವ ಮಹಿಳೆ ಪೋಲೀಸ ಠಾಣೆ ಮುಂದೆಯೇ ನಿಂತು ರಾಘವೇಂದ್ರ ಗೋಕಾಕ ಅವರ ಪ್ರಕರಣದಲ್ಲಿ, ಯಾರನ್ನಾದರೂ ನಂಬಿ ಆದರೆ ಬೆಂಡಿಗೇರಿ ಇನ್ಸ್ಪೆಕ್ಟರ್ ಅವರನ್ನ ಮಾತ್ರ ನಂಬಲೇ ಬೇಡಿ ಅಂತಾ ಬೊಬ್ಬೆ ಹೊಡಿದಿದ್ದಳು.

ಈಗಲೂ ಸಹ ಕಳೆದ 21 ರಂದು ಮಹ್ಮದಗೌಸ.ಚನ್ನಾಪುರ ಎಂಬಾತ ಇಬ್ಬರ ಮೇಲೆ ದೂರು ಕೊಟ್ಟಿದ್ದಾನೆ.(cr number. 108/2026.)ದೂರು ಕೊಟ್ಟು ನಾಲ್ಕು ದಿನಗಳಾದರೂ ಆರೋಪಿಗಳನ್ನ ವಿಚಾರಣೆಗೆ ಕರೆದಿಲ್ಲಾ ಅಂದರೆ ದೂರುದಾರರಿಗೆ ಇವರೆಂತಾ ನ್ಯಾಯಾ ಕೊಡಬಲ್ಲರು ಅನ್ನೋ ಪ್ರಶ್ನೆ.ಅದರಲ್ಲೂ ಆಮ್ಸ್೯ ಆ್ಯಕ್ಟ್ 1959(us.25,27) ನಡಿಯಲ್ಲಿ ದೂರು ದಾಖಲಾಗಿದೆ.

ಅಲ್ಲದೇ ದೂರುದಾರರ ಮನೆಗೆ ನುಗ್ಗಿ ಹೆದರಿಸಿ ಬೆದರಿಸಿ ಪ್ಲ್ಯಾಟ್ ನ ದಾಖಲೆಗಳನ್ನು ರೌಡಿಸಂ ಮಾಡಿ ತೆಗೆದುಕೊಂಡು ಹೋಗತಾರಂತೆ ಇಂತಹ ಗಂಭೀರ ಆರೋಪಗಳಿದ್ದರೂ ಬೆಂಡಿಗೇರಿ ಪೋಲೀಸರು ಮೌನವಾಗಿದ್ದರೆ ದೂರುದಾರನ ಕಥೆ ಏನು ನಾಯಕರೇ.

ಈ ಪ್ರಕರಣದಲ್ಲಿ ಆರೋಪಿತರಿಗೆ BNS 35 ಪ್ರಕಾರ ನೋಟೀಸ್ ಆದರೂ ಕೊಟ್ಟು.ಅವರನ್ನ ಕರೆಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಾಗಿದ್ದರೆ ಅವರ ಮೇಲೆ ಕ್ರಮಕೈಕೊಳ್ಳಬೇಕಲ್ಲಾ ನಾಯಕರೇ..ಒಂದು ಸಣ್ಣ ಮನೆಗಳ್ಳತನ ಕೇಸ್ ಭೇಧಿಸಿದರೆ ಉದ್ದೂದ್ದ ಪೋಟೋ ತೆಗೆಸಿಕೊಳ್ಳೋ ನೀವು ಇಂತಹ ಗಂಭೀರ ಪ್ರಕರಣದಲ್ಲಿ ಸುಮ್ನೆ ಕುಂತರೇ ಹೆಂಗೇ ಸರ್..

ದೂರುದಾರ ಏನು ಹೇಳಿದ್ದಾನೆ..ಆರೋಪಿಗಳು ಯಾರು.? ಅವರ ಹಿನ್ನೆಲೆ ಏನು.? ಇದರಲ್ಲಿ ಪೋಲೀಸರು ಯಾಕೆ ಮೌನವಹಿಸಿದರು ಅನ್ನೋದನ್ನ ನಿರೀಕ್ಷಿಸಿ ನಿಮ್ಮ ಉದಯ ವಾರ್ತೆಯಲ್ಲಿ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author