ಸಚಿವರ ಕಾರಿಗೆ ಡ್ರೈವರ್ ಆದ ಧಾರವಾಡ ಡಿಸಿ..ಡಿಸಿ ಡ್ರೈವಿಂಗ್ ಗೆ ಬೆರಗಾದ ಲಾಡ್..
ಧಾರವಾಡ:-ಅಬ್ಬಾ ಏನ್ರೀ ಇದು ಸುದ್ದಿ ಅಂತೀರಾ..ಹೌದು ಧಾರವಾಡ ಡಿಸಿ ಸ್ನೇಹಲ್.ಆರ್ ಅವರು ಧಾರವಾಡ ಜಿಲ್ಲಾ ಉಸ್ತುವರಿ ಸಚಿವ ಸಂತೋಷ್ ಲಾಡ್ ಅವರ ಕಾರು ಚಾಲನೆ ಮಾಡಿ ಸಚಿವರು ಬೆರಗಾಗುವಂತೆ ಮಾಡಿದರು.
ಇಂದು ಧಾರವಾಡದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದ ಸಚಿವ ಸಂತೋಷ್ ಲಾಡ್ ಹಾಗೂ ಧಾರವಾಡ ಜಿಲ್ಲಾಧಿಕಾರಿ ಸುಹೇಲ್ ಆರ್ ಅವರು ಕಾರ್ಯಕ್ರಮ ಮುಗಿಸಿ ಹೊರಡುವ ಸಂದರ್ಭದಲ್ಲಿ ಸಚಿವರ ಕಾರು ಹತ್ತಿದ ಡಿಸಿ ಸಚಿವರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಡ್ರೈವಿಂಗ್ ಮಾಡಿದ ಘಟನೆ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.