ಮಕ್ಕಳ ದಿನಾಚರಣೆಯಂದೇ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಿದ ಹುಬ್ಬಳ್ಳಿ ಪೊಲೀಸರು.,.. ಕಾರ್ಯಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಕಮಿಷನರ್…

Share to all

ಮಕ್ಕಳ ದಿನಾಚರಣೆಯಂದೇ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಿದ ಹುಬ್ಬಳ್ಳಿ ಪೊಲೀಸರು.,.. ಕಾರ್ಯಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಕಮಿಷನರ್…

ಹುಬ್ಬಳ್ಳಿ:-ಪೋಷಕರೊಂದಿಗೆ ಮನಸ್ತಾಪ ಮಾಡಿಕೊಂಡು ಮನೆ ಬಿಟ್ಟು ಹುಬ್ಬಳ್ಳಿಯ ಸಂಬಂಧಿಕರ ಮನೆಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಸಂಬಂಧಿಕರು ಹುಬ್ಬಳ್ಳಿಯ ಗಬ್ಬೂರಿನಿಂದ ಅವರ ಗ್ರಾಮಕ್ಕೆ ಬಸ್ ಮೂಲಕ ಕಳಿಸಿದ್ದರು. ಆದರೆ ಬಾಲಕಿ ಮನೆಗೆ ತೆರಳದೆ ಬೇರೆ ಕಡೆ ಹೋಗಿದ್ದಳು….

ಬಾಲಕಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.. ಬಾಲಕಿ ಹುಬ್ಬಳ್ಳಿಯಿಂದ ಬಸ್ ಹತ್ತಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸರು ಇನ್ಸ್ಪೆಕ್ಟರ್ ಲಕ್ಷ್ಮಣ ನಾಯಕ ಅವರ ನೇತೃತ್ವದಲ್ಲಿ ಬಾಲಕಿಯ ಪತ್ತೆ ಕಾರ್ಯಚಣೆಗೆ ಇಳಿದರು..

ಕಸಬಾ ಪೊಲೀಸ್ ಠಾಣೆಯ ಸಿಪಿಐ ಲಕ್ಷ್ಮಣ್ ನಾಯಕ್ ಬಾಲಕಿಯ ಫೋಟೋವನ್ನು ಕೆಎಸ್ಆರ್ಟಿಸಿಯ ಚಾಲಕ ಮತ್ತು ನಿರ್ವಾಹಕರ ವ್ಯಾಟ್ಸಪ್ ಗ್ರೂಪ್ಗಳಿಗೆ ರವಾನಿಸಿ. ಈ ಫೋಟೋದಲ್ಲಿರುವ ಬಾಲಕಿ ಕಂಡರೆ ತಕ್ಷಣ ಈ ಕೆಳಗಿನ ನಂಬರಿಗೆ ಸಂಪರ್ಕಿಸುವಂತೆ ಮನವಿ ಮಾಡಿದ್ದರು. ಅಲ್ಲದೇ ಬಾಲಕಿಯು ಬಸ್ ಹತ್ತಿದ ನಂತರದ ಎಲ್ಲಾ ಕಡೆಯ ಸಿಸಿಟಿವಿ ಪುಟೇಜಗಳನ್ನು ಪರಿಶೀಲನೆ ನಡೆಸುವ ಜೊತೆಗೆ ಬಾಲಕಿಯ ಪತ್ತೆಗೆ ಶ್ರಮಿಸಿದ್ದರು…

 

 

ಬಾಲಕಿಯ ಸಂಪೂರ್ಣ ಚಲನವಲನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ ಹುಬ್ಬಳ್ಳಿ ಪೊಲೀಸರು ಕೊನೆಗೆ ಎಲ್ಲಮ್ಮನ ಗುಡ್ಡದಿಂದ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ಬಂದಿದಾಗ ಕೆ ಎಸ್ ಆರ್ ಟಿ ಸಿ ಯ ಸಿಬ್ಬಂದಿಯ ಕಣ್ಣಿಗೆ ಬಿದ್ದ ಹಿನ್ನೆಲೆಯಲ್ಲಿ ತಕ್ಷಣ ಪೊಲೀಸರ ಮೊಬೈಲ್ ನಂಬರ್ ಗೆ ಸಂಪರ್ಕಿಸಿ ಮಾಹಿತಿ ತಿಳಿಸುತ್ತಾರೆ.. ಸಮೀಪದ ಗೋಕುಲ್ ರಸ್ತೆಯ ಪೊಲೀಸ್ ಠಾಣೆಗೆ ಮಾಹಿತಿ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಸಿಬ್ಬಂದಿ ಲಕ್ಷ್ಮಣ್ ನಾಯಕ್ ಸ್ಥಳಕ್ಕೆ ಧಾವಿಸಿ, ಬಾಲಕಿಯನ್ನು ರಕ್ಷಣೆ ಮಾಡಿ ಕರೆತಂದಿದ್ದಾರೆ..

ಒಟ್ಟಾರೆ ಹುಬ್ಬಳ್ಳಿ ಕಸಬಾಪೇಟೆಯ ಪೊಲೀಸ್ ಇನ್ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ಹಾಗೂ ಅಲ್ಲಿಯ ಸಿಬ್ಬಂದಿ ಮತ್ತು ಗೋಕುಲ್ ರಸ್ತೆಯ ಪೊಲೀಸ್ ಲಕ್ಷ್ಮಣ್ ನಾಯಕ್ ಅವರ ಸಮಯಪ್ರಜ್ಞೆಗೆ ಪೊಲೀಸ್ ಕಮಿಷನರ್ ಅಭಿನಂದನೆ ಸಲ್ಲಿಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author