ಕೂಲಿ ಮಾಡಿ ಕಟ್ಟಿದ ಮನೆಗೂ ನೆಮ್ಮದಿಯಿಲ್ಲವೇ? ನನ್ನ ಮನೆಯನ್ನು ಉಳಿಸಿಕೊಡಿ ಎಂದು ಕಣ್ಣೀರಿಡುತ್ತಿರುವ ಹೇಮಾವತಿ!
ಹುಬ್ಬಳ್ಳಿ:-ಜೀವನಪೂರ್ತಿ ಕೂಲಿ ನಾಲಿ ಮಾಡಿ, ಬೆವರು ಸುರಿಸಿ, ಕಷ್ಟಪಟ್ಟು ಕಟ್ಟಿಕೊಂಡ ಪುಟ್ಟ ಮನೆಯೇ ಒಬ್ಬ ಮಹಿಳೆಯ ಪಾಲಿಗೆ ಬದುಕಿನ ಆಸರೆಯಾಗಿರುತ್ತದೆ. ಆದರೆ ಅದೇ ಮನೆ ಕೈತಪ್ಪುವ ಭೀತಿ ಎದುರಾದರೆ ಆಕೆಯ ಬದುಕು ಹೇಗಾಗಬಹುದು?.
ಇಂತಹದ್ದೇ ಒಂದು ಮನಕಲಕುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಹೇಮಾವತಿ ಎಂಬ ಮಹಿಳೆ 2001ರಲ್ಲೇ ಮನೆ ಖರೀದಿಸಿದ್ದು, ಅಂದಿನಿಂದ ಆ ಮನೆಯನ್ನು ತನ್ನ ಬದುಕಿನ ಆಧಾರವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಇದೀಗ ವಿನಾಯಕ ಎಂಬ ವ್ಯಕ್ತಿ ತನ್ನ ಮನೆಯನ್ನು ಅಕ್ರಮವಾಗಿ ಕಬಳಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಹೇಮಾವತಿ ಮಾಡಿದ್ದಾರೆ.