ಆಸ್ತಿ ವಿವಾದ, ಪೋಲೀಸ ಠಾಣೆ ಮೆಟ್ಟಿಲೇರಿದ ಬಿಜೆಪಿ ನಾಯಕರು.ಸಿಪಿಆಯ್ ಆ್ಯಂಡ ಉಮೇಶ ಧೂಷಿ ನಡುವೆ ಟಾಕ್ ವಾರ್.

Share to all

ಆಸ್ತಿ ವಿವಾದ, ಪೋಲೀಸ ಠಾಣೆ ಮೆಟ್ಟಿಲೇರಿದ ಬಿಜೆಪಿ ನಾಯಕರು.ಸಿಪಿಆಯ್ ಆ್ಯಂಡ ಉಮೇಶ ಧೂಷಿ ನಡುವೆ ಟಾಕ್ ವಾರ್.

ಹುಬ್ಬಳ್ಳಿ:- ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಆಸ್ತಿಯ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಆಸ್ತಿ ವಿವಾದಗಳು ಹೆಚ್ಚಾಗ್ತಿವೆ.ಅಂತಹ ಆಸ್ತಿಗೆ ಸಂಬಂಧಿಸಿದಂತೆ ಕಳೆದ ಎರಡ್ಮೂರು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರಿಬ್ಬರು ಪೋಲೀಸ ಠಾಣೆ ಮೆಟ್ಟಲೇರಿದ್ದಾರೆ.

ಏನದು ಆ ಇಬ್ಬರು ಬಿಜೆಪಿ ನಾಯಕರ ಬೀದಿ ಜಗಳ ಅಂತೀರಾ ಇಲ್ಲಿದೆ ನೋಡಿ ಆ ಸ್ಟೋರಿ…….

ಹುಬ್ಬಳ್ಳಿಯ ಅರವಿಂದ ನಗರದಲ್ಲಿರುವ ಒಂದು ಖಾಲಿ ಜಾಗೆಯ ವಿಚಾರ.ಅಲ್ಲಿ ವಿವೇಕಾನಂದ ಸ್ಕೂಲ ಇದೆ.ಆ ಸ್ಕೂಲಿಗೆ ಹೊಂದಿಕೊಂಡೇ ಒಂದು ಖಾಲಿ ಜಾಗ ಇದ್ದು.ಆ ಜಾಗ ನಮಗೆ ಸೇರಿದ್ದು ಎಂದು ಕ್ರಷ್ಣಾ ಗಂಡಗಾಳಕರ ಕಳೆದ ಶುಕ್ರವಾರ ಅಲ್ಲಿ ಗೇಟ್ ಮತ್ತು ಕಟ್ಟಿಗೆ ಹಾಕಲು ಮುಂದಾಗಿದ್ದಾರೆ.ಅವಾಗ ವಿವೇಕಾನಂದ ಸ್ಕೂಲನ ಆಡಳಿತ ಮಂಡಳಿ ಅಲ್ಲಿ ಏನೂ ಮಾಡಬೇಡಿ ಅದು ಪಾಲಿಕೆಯ ಆಸ್ತಿ ಅಂತಾ ಗಂಡಗಾಳೇಕರ ಅವರಿಗೆ ಹೇಳಿದಾಗ ಆಡಳಿತ ಮಂಡಳಿ ಮತ್ತು ಕ್ರಷ್ಣಾ ಗಂಡಗಾಳೇಕರ ಮದ್ಯೆ ಮಾತಿಗೆ ಮಾತು ಬೆಳೆದು ಆಡಳಿತ ಮಂಡಳಿ ಕ್ರಷ್ಣಾ ಗಂಡಗಾಳೇಕರ ವಿರುದ್ಧ ಹಳೇಹುಬ್ಬಳ್ಳಿ ಪೋಲೀಸ ಠಾಣೆಯಲ್ಲಿ ದೂರು ದಾಖಲು ಮಾಡಲು ಹೋದಾಗ ಇನ್ಸ್ಪೆಕ್ಟರ್ ಸುರೇಶ ಯಳ್ಳೂರ ಇದು ಸಿವಿಲ್ ಮ್ಯಾಟರ್ ಇರುವುದರಿಂದ ನಮಗೆ ದೂರು ದಾಖಲು ಮಾಡಿಕೊಳ್ಳಲು ಬರುವುದಿಲ್ಲಾ.ನೀವು ಸರ್ವೇ ಮಾಡಿಸಿ ಅಂತಾ ಹೇಳಿದ್ದಕ್ಕೆ ಬಿಜೆಪಿ ನಾಯಕ ಉಮೇಶ ನೀವು ಹೆಂಗ ಕಂಪ್ಲೇಟ್ ತೆಗೆದುಕೊಳ್ಳುದಿಲ್ಲಾ ನೋಡಕೋಳ್ಳತೇನಿ ಅಂತಾ ಅವಾಜ್ ಹಾಕಿದರಂತೆ.ಠಾಣೆಯ ಒಳಗೆ ಏನೇನ ನಡೀತೋ ಗೊತ್ತಿಲ್ಲಾ.ಆದರೆ ಬಿಜೆಪಿ ನಾಯಕ ಮತ್ತು ಇನ್ಸ್ಪೆಕ್ಟರ್ ಬೀದಿ ಜಗಳ ನೋಡಿದರೆ ಗೊತ್ತಾಗುತ್ತೇ ಅದನ್ನ ನೀವೇ ನೋಡಿ…..

ಆ ಆಸ್ತಿ ವಿವಾದದಲ್ಲಿ ಆಡಳಿತ ಮಂಡಳಿ ಬಿಜೆಪಿ ನಾಯಕ ಕ್ರಷ್ಣಾ ಗಂಡಗಾಳೇಕರ ಮತ್ತು ಬೆಂಬಲಿಗರ ಮೇಲೆ ದೂರು ನೀಡಿದರೆ.ಕ್ರಷ್ಣಾ ಗಂಡಗಾಳೇಕರ ಉಮೇಶ ಧೂಷಿ ಮತ್ತು ಆಡಳಿತ ಮಂಡಳಿಯ ಮೇಲೆ ದೂರು ನೀಡಿದ್ದಾರೆ.ದೂರು ಪ್ರತಿ ದೂರು ದಾಖಲಾಗಿದೆ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author