ಬಿಜೆಪಿಯರದು ಪೊಳ್ಳು ಭರವಸೆಯ ಬಜೆಟ್: ರಜತ್ ಉಳ್ಳಾಗಡ್ಡಿಮಠ

Share to all

ಬಿಜೆಪಿಯರದು ಪೊಳ್ಳು ಭರವಸೆಯ ಬಜೆಟ್: ರಜತ್ ಉಳ್ಳಾಗಡ್ಡಿಮಠ

ಹುಬ್ಬಳ್ಳಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಅತ್ಯಂತ ನೀರಸವಾಗಿದೆ. ಇದು ಬಿಜೆಪಿಯವರ ಪೊಳ್ಳು ಭರವಸೆಗಳಷ್ಟೇ.ಇದೊಂದು ಮುಂಬರುವ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆ ಎಂದೇ ಬಿಂಬಿಸಬಹುದು. ಬಜೆಟ್ ಜನರ ವಿಶ್ವಾಸ ಮತ್ತು ನಂಬಿಕೆಯನ್ನು ಹುಸಿಗೊಳಿಸಿದೆ. ಬರೀ ಕಾರ್ಯಕ್ರಮಗಳ ಹೆಸರುಗಳು ಬದಲಾಗಿವೆ ಅಷ್ಟೇ.

ದೇಶದ ಆರ್ಥಿಕ ಸ್ಥಿತಿಗಂತೂ ಮಂಕು ಕವಿದಿದೆ. ಸುಳ್ಳು ಭರವಸೆಗಳ ನಡುವೆ ದೇಶ ಎತ್ತ ಸಾಗುತ್ತಿದೆ ಎನ್ನುವುದು ಅನುಮಾನ ಮೂಡುತಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿದಿರುವುದಕ್ಕೆ ಈ ಬಜೆಟ್ ‘ಕೈಗನ್ನಡಿ’ ಆಗಿದೆ.ನಾರಿಯರ ಸಬಲೀಕರಣ, ಕೃಷಿ ಕ್ಷೇತ್ರಕ್ಕೆ ಆದ್ಯತೆ, ಸಣ್ಣ ನಗರಗಳಿಗೂ ಮೆಟ್ರೋ ವಿಸ್ತರಣೆ ಇನ್ನಿತರ ಬಜೆಟ್ ಘೋಷಣೆಗಳು ಮುಂದಿನ ದಿನಗಳಲ್ಲಿ ಬರಿ ಘೋಷಣೆಯಾಗಿಯೇ ಉಳಿಯಲಿವೆ.

ಬಜೆಟ್ ಮೂಲಕ ಬಿಜೆಪಿ ಅಭಿವೃದ್ಧಿಯೇ ನಮ್ಮ ಗುರಿ ಎಂದಿದೆ. ಇದು ದೇಶದ ಜನರಿಗೆ ಮಾಡುತ್ತಿರುವ ದ್ರೋಹ. ಬಿಜೆಪಿಗೆ ಚುನಾವಣೆ ಗೆಲುವೇ ಗುರಿಯಾಗಿದೆ. ಬರುವಂತಹ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠವಾಗಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ
ಟೀಕೆ ಮಾಡಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author