ಅರಣ್ಯ ಕಳ್ಳರ ಮೇಲೆ ಕ್ರಮಕ್ಕೆ ಶಾಸಕರ ಸೂಚನೆ.ಟ್ರಾಕ್ಟರ್ ಪಲ್ಟಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಆರ್ ವಿ ದೇಶಪಾಂಡೆ.
ದಾಂಡೇಲಿ:-ಈ ಹಿಂದೆ ಪಣಸೋಲಿ ವನ್ಯ ಜೀವಿ ವಲಯದ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಒಂದು ಪಲ್ಟಿಯಾಗಿ ಚಾಲಕ ಮೃತ ಪಟ್ಟಿದ್ದನು.ಆದರೆ ಈ ಪ್ರಕರಣದಲ್ಲಿ ದಾಂಡೇಲಿ ಗ್ರಾಮೀಣ ಪೋಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರನೊಂದಿಗೆ ಶಾಮೀಲಾಗಿ ಆ ಪ್ರಕರಣವನ್ನು ಅದಲ ಬದಲ ಕಂಚಿ ಬದಲ ಮಾಡಿದ್ದಾರೆ ಅಂತಾ ಅಲ್ಲಿಯ ಜನಾನೇ ಮಾತಾಡಿಕೊಳ್ಳಿತ್ತಾದ್ದಾರೆ.
ಈ ಪ್ರಕರಣವನ್ನು ಶಾಸಕ ಆರ್ ವ್ಹಿ ದೇಶಪಾಂಡೆ ಅವರ ಗಮನಕ್ಕೂ ಅಲ್ಲಿ ಜನ ತಂದಿದ್ದಾರೆ. ಆ ಹಿನ್ನೆಲೆಯಲ್ಲಿ ಮೊನ್ನೆ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.ಅಲ್ಲದೇ ಅರಣ್ಯ ಕಳ್ಳರ ಮೇಲೆ ಕ್ರಮ ಏಕಿಲ್ಲಾ.ಕಳ್ಳಸಾಕಾಣಿಕೆ ಮಾಡುವವರ ಮೇಲೆ ಯಾಕೆ ದೂರು ದಾಖಲು ಮಾಡಿಲ್ಲಾ.ಪ್ರಭಾವಿಗಳು ಅಂತಾ ಕೈ ಬಿಟ್ಟಿದ್ದೀರಾ.ತಕ್ಷಣ ಅವರ ಮೇಲೆ ಕ್ರಮ ಕೈಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.
ಪ್ರಕರಣ ನಡೆದ ದಿನವೇ ಉದಯ ವಾರ್ತೆ ಈ ಪ್ರಕರಣವನ್ನು ಟ್ರ್ಯಾಕ್ಟರ್ ಪಲ್ಟಿ ಚಾಲಕ ಸಾವು ಪ್ರಕರಣ.ಅದಲ ಬದಲ ಕಂಚಿ ಬದಲ ಮಾಡಿದರೇ ಅರಣ್ಯ ಇಲಾಖೆ.ದಕ್ಷ ಅರಣ್ಯ ಇಲಾಖೆಯ ಅಧಿಕಾರಿಗಳೇ ಏನಿದು ಅಂತಾ ವರದಿ ಮಾಡಿತ್ತು.
ಆ ಟ್ರ್ಯಾಕ್ಟರ್ ಪಲ್ಟಿ ಪ್ರಕತಣದಲ್ಲಿ ನೂರಕ್ಕೂ ಹೆಚ್ಚು ಸಾಗವಾನಿ ಎಳೆಗಳಿದ್ದವು ಎನ್ನಲಾಗಿದೆ.ಆ ಸಾಗವಾನಿ ಎಳೆಗಳು ಎಲ್ಲಿ ಹೋದವು.ಆ ಟ್ರ್ಯಾಕ್ಟರ್ ಮಾಲಿಕನ ಮೇಲೆ ದೂರು ಯಾಕೆ ದಾಖಲಾಗಲಿಲ್ಲಾ.ಎನ್ನುವ ಹತ್ತಾರು ಪ್ರಶ್ನೆಗಳಿಗೆ ಮುಖ್ಯ ಅರಣ್ಯ ಸಂರಕ್ಚಣಾಧಿಕಾರಿಗಳು ಉತ್ತರ ಕೊಡಬೇಕಿದೆ.