ಒಂದು ಕೋಟಿ ರೂ ಹಣದೊಂದಿಗೆ ಮಗಳು ಎಸ್ಕೇಪ್.ಪ್ರಿಯಕರನೊಂದಿಗೆ ಬೆಳ್ಳಂ ಬೆಳೆಗ್ಗೆ ಹಾರಿಹೋದ ಪಂಜರದ ಗಿಳಿ..

Share to all

ಒಂದು ಕೋಟಿ ರೂ ಹಣದೊಂದಿಗೆ ಮಗಳು ಎಸ್ಕೇಪ್.ಪ್ರಿಯಕರನೊಂದಿಗೆ ಬೆಳ್ಳಂ ಬೆಳೆಗ್ಗೆ ಹಾರಿಹೋದ ಪಂಜರದ ಗಿಳಿ..

ಬೆಂಗಳೂರು : ತನ್ನ ಪ್ರಿಯಕರನ ಜತೆ ಮನೆಯಲ್ಲಿದ್ದ ಸುಮಾರು ಒಂದು ಕೋಟಿ ಹಣವನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ಸ್ವತಃ ತಂದೆ ದೂರು ದಾಖಲಿಸಿದ್ದಾರೆ.

ಏಪ್ರಿಲ್ 21ರಂದು ರಾತ್ರಿ ಮಲಗಲು ಎಂದು ರೂಮ್ ಗೆ ಹೋಗಿದ್ದಾಳೆ ಆದರೆ, ಮರುದಿನ ಬೆಳಗ್ಗೆ 5 ಗಂಟೆ ಸುಮಾರಿಗೆ ಮನೆಯವರು ಮಗಳು ಕಾಣೆಯಾಗಿದ್ದಾಳೆ ಎಂದು ಕಾಟನ್‌ಪೇಟೆ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ.

ತಂದೆ ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ್ದು, ಆಕೆ ತನ್ನೊಂದಿಗೆ ಯಾವುದೇ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆಯೇ ಎಂದು
ವಿಚಾರಿಸಿದ್ದಾರೆ. ಈ ವೇಳೆ ಮಗಳ ತಾಯಿ ಮನೆಯನ್ನು ಪರಿಶೀಲಿಸಿದ್ದು, ಯಾವುದೇ ಚಿನ್ನಾಭರಣ ತೆಗೆದುಕೊಂಡು ಹೋಗಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಇದಾದ ನಂತರ ಯುವಕ, ಯುವತಿ ಇಬ್ಬರೂ ಓಡಿ ಹೋಗಿ ಮದುವೆಯಾಗಿದ್ದಾರೆ ಎಂದು ಪೋಷಕರಿಗೆ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ತಮ್ಮ ಪುತ್ರಿ 19 ವರ್ಷ ವಯಸ್ಸಾಗಿದ್ದು, ಕಾನೂನು ಪ್ರಕಾರ ಇವರಿಗೆ ಇಷ್ಟವಿದ್ದೆ ಮದುವೆಯಾಗಿದ್ದಾರೆ ಎಂದು ತಿಳಿಸಿದ್ದಾರೆ

ಮಗಳ ಈ ಕೆಲಸಕ್ಕೆ ಬೇಜಾರಿಗಿದ್ದ ತಂದೆ ನಾವು ಮಗಳಿಗೆ ಆಕೆಯ ಕುಟುಂಬಕ್ಕೆ ಯಾವುದೇ ತೊಂದರೆ ನೀಡುವುದಿಲ್ಲ. ಆದರೆ ಆಕೆಗೆ ನಾವು ಯಾವುದೇ ಆಸ್ತಿಯನ್ನು ಕೊಡುವುದಿಲ್ಲ. ಅಲ್ಲದೇ ಆಕೆ ಅಗತ್ಯವಿರುವ ದಾಖಲೆಗಳಿಗೆ ಸಹಿ ಮಾಡಬೇಕು ಎಂದು ಹೇಳಿದ್ದರು. ಇದಕ್ಕೆ ಆಕೆಯೂ ಒಪ್ಪಿಕೊಂಡಿದ್ದು, ಬಳಿಕ ಕುಟುಂಬದಿಂದ ಯುವತಿ ದೂರಾಗಿದ್ದಾಳೆ.

ಈ ಘಟನೆಯಾಗಿ ಕೆಲ ದಿನಗಳ ನಂತರ ಬೇರೊಂದು ಕಡೆಗೆ ಹೋಗುವ ವೇಳೆ ಬ್ಯಾಗ್‌ ಪ್ಯಾಕ್ ಮಾಡುವಾಗ ಕಬೋರ್ಡ್ ನಲ್ಲಿ ಇಟ್ಟಿದ್ದ ಒಂದು ಕೋಟಿ ರೂಪಾಯಿ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಯುವತಿಯ ಪೋಷಕರು ಪೊಲೀಸರ ಮೋರೆ ಹೋಗಿದ್ದು, ಮಗಳೇ ಹಣವನ್ನು ಕದ್ದಿದ್ದಾಳೆ ಎಂದು ದೂರು ನೀಡಿದ್ದಾರೆ ಅಲ್ಲದೇ ಹಣವನ್ನು ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಉದಯ ವಾರ್ತೆ
ಬೆಂಗಳೂರು


Share to all

You May Also Like

More From Author