ತಾಳಿ ಕಟ್ಟಿದ ಗಂಡನನ್ನೇ ಬರ್ಭರವಾಗಿ ಹತ್ಯೆ ಮಾಡಿದ ಹೆಂಡ್ತಿ..ಮಗನನ್ನು ನೋಡಲು ಬಂದ ಪತಿಯನ್ನು ಇಹಲೋಕಕ್ಕೆ ಕಳಿಸಿದ ಧರ್ಮಪತ್ನಿ.

Share to all

ತಾಳಿ ಕಟ್ಟಿದ ಗಂಡನನ್ನೇ ಬರ್ಭರವಾಗಿ ಹತ್ಯೆ ಮಾಡಿದ ಹೆಂಡ್ತಿ..ಮಗನನ್ನು ನೋಡಲು ಬಂದ ಪತಿಯನ್ನು ಇಹಲೋಕಕ್ಕೆ ಕಳಿಸಿದ ಧರ್ಮಪತ್ನಿ.

ಕಲಬುರಗಿ: ಗಂಡ ಎಂದರೆ ದೇವರ ಸಮಾನ, ಆತ ಹಾಕಿದ ಗೆರೆ ದಾಟಬಾರದು ಎಂಬಂತಿದ್ದ ಆ ಕಾಲಘಟ್ಟ ಎಲ್ಲಿ, ಗಂಡನನ್ನ ಕಪಿಮುಷ್ಟಿಯಲ್ಲಿಡಿದುಕೊಂಡು ತನಗಿಷ್ಟ ಬಂದಂತೆ ನಡೆಸಿಕೊಳ್ಳುವ ಈ ಕಾಲಘಟ್ಟವೆಲ್ಲಿ.

ಹೌದು ಕಾಲ ಕೆಟ್ಟೋಯ್ತು ಇಲ್ಲೊಬ್ಬ ಹೆಂಡತಿ ತನ್ನ ಗಂಡನ ಕೈ ಕಾಲು ಕಟ್ಟಿ ಹಾಕಿ ಬರ್ಭರ ಹತ್ಯೆ ಮಾಡಿದ ಘಟನೆ ಜರುಗಿದೆ. 26 ವರ್ಷದ ಈಶ್ವರ್ ಕೊಲೆಯಾದ ವ್ಯಕ್ತಿ ಎನ್ನಲಾಗಿದೆ.

ಕೃತ್ಯಕ್ಕೆ ಆಕೆಯ ಮನೆಯವರು ಕೂಡ ಸಾಥ್ ಕೊಟ್ಟಿದ್ದಾರೆ. ಮಗುವನ್ನ ನೋಡಲು ಪತ್ನಿ ಮನೆಗೆ ಈಶ್ವರ್‌ ಹೋಗಿದ್ದ ವೇಳೆ ಕೃತ್ಯ ಸಂಭವಿಸಿದೆ. ಕಲಬುರಗಿ ನಗರದಲ್ಲೆ ಆಟೋ ಚಾಲಕನಾಗಿ ಈಶ್ವರ್ ಕೆಲಸ ಮಾಡ್ತಿದ್ದ. ಕಳೆದ ನಾಲ್ಕೈದು ವರ್ಷದ ಹಿಂದೆ ರಂಜಿತಾ ಜೊತೆ ಮದುವೆಯಾಗಿದ್ದ. ಗಂಡ ಹೆಂಡತಿಯ ಮದ್ಯೆ ಜಗಳವಾದ ಹಿನ್ನೆಲೆ, ಕಳೆದ ನಾಲ್ಕೈದು ತಿಂಗಳಿಂದ ತಾಯಿ ಮನೆಯಲ್ಲಿ ರಂಜಿತಾ ವಾಸವಾಗಿದ್ದರು. ನಿನ್ನೆ ರಾತ್ರಿ ಮಗುವನ್ನು ನೋಡಲು ಬಂದು ಗಲಾಟೆ ನಡೆದಿದೆ. ಈ ವೇಳೆ ಗಲಾಟೆ ವಿಕೋಪಕ್ಕೆ ಹೋಗಿ ಕೊಲೆ ಮಾಡಲಾಗಿದೆ.

ಆರ್ ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

ಉದಯ ವಾರ್ತೆ
ಕಲಬುರ್ಗಿ


Share to all

You May Also Like

More From Author