ಸರಕಾರಿ ಗುಡ್ಡವನ್ನೂ ಬಿಡದ ನಮ್ಮೂರ ನಾಯಕರು..ಅನುಮತಿ ಇಲ್ಲದೇ ಸರಕಾರಿ ಗುಡ್ಡದ ಮಣ್ಣು ತೆಗೆದ ರೈತ ನಾಯಕರು.ಸಾವಿರಾರು ಲೋಡ್ ಮಣ್ಣು ಹೋಗಿದ್ದೆಲ್ಲಿಗೆ.
ಹುಬ್ಬಳ್ಳಿ:- ಹೌದು ಬಂಡಾಯ ನೆಲದ ಪಾರಂಪರಿಕ ಗುಡ್ಡದಲ್ಲಿರುವ ಮಣ್ಣನ್ನು ತೆಗೆದು ಎಲ್ಲಿ ಕಳಿಸಿದರು.ಸರಕಾರಿ ಗುಡ್ಡದ ಮಣ್ಣು ತೆಗೆಯಲು ಫರ್ಮಿಶನ್ ಕೊಟ್ಟವರು ಯಾರು.? ಎಂಬ ಪ್ರಶ್ನೆ ಈಗ ನವಲಗುಂದದ ಜನರನ್ನು ಕಾಡುತ್ತಿದೆ.
ಸಾಮಾನ್ಯ ಜನರು ಮನೆ ಕಟ್ಟಲು ಒಂದು ಗಾಡಿ ಮಣ್ಣೋ ಉಸುಕೋ ಇನ್ನೊಂದೋ ತರುತ್ತಿದ್ದರೆ.ಸದ್ದು ಗದ್ದಲವಿಲ್ಲದೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಬಂದ್ ರೇಡ್ ಮಾಡಿಯೇ ಬಿಡುತ್ತಾರೆ ಅಲ್ಲದೇ ಮೂರ್ನಾಲ್ಕು ದಿನ ಮಾಲಿಕರನ್ನ ಅಲೆದಾಡಿಸಿ 80 ಸಾವಿರ ಗಾಡಿ ಒಂದಕ್ಕೆ ತಂಡ ಹಾಕಿ ಕಳಿಸ್ತಾರೆ.ಈಗ ಗುಡ್ಡವನ್ನೇ ಕರಗಿಸಲು ಹೊರಟಿರುವ ನಮ್ಮೂರ ನಾಯಕರ ಮೇಲೆ ಕ್ರಮ ಏಕೆ ಇಲ್ಲಾ ಅಂತಾ ಅಧಿಕಾರಿಗಳನ್ನ ಪ್ರಶ್ನಿಸುವಂತಾಗಿದೆ.
ಈ ಮದ್ಯೆ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಮಣ್ಣು ಲೂಟಿಕೋರರ ವಿರುದ್ಧ ಸಿಡಿದೆದ್ದು.ಕೋಟಿ ಕೋಟಿ ಲೂಟಿ ಮಾಡಿದವರ ವಿರುದ್ಧ ಕ್ರಮ ಕೈಕೊಳ್ಳದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.