ಅಂಗನವಾಡಿ ಕಾರ್ಯಕರ್ತೆಯರನ್ನ ಕಣ್ಣೀರು ಹಾಕಿಸಿದ ತಾಲೂಕಾ ಅಧಿಕಾರಿ.

Share to all

ಅಂಗನವಾಡಿ ಕಾರ್ಯಕರ್ತೆಯರನ್ನ ಕಣ್ಣೀರು ಹಾಕಿಸಿದ ತಾಲೂಕಾ ಅಧಿಕಾರಿ.

ಹುಬ್ಬಳ್ಳಿ:-ಧಾರವಾಡ ಜಿಲ್ಲೆಯ ಕುಂದಗೋಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಯೊಬ್ಬರು ನಿನ್ನೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಅವರನ್ನು ಬೀಳ್ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಆ ಒಂದು ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಿಕ್ಕಿ ಬಿಕ್ಕಿ ಅತ್ತು ಅವರನ್ನು ಹಾಡಿ ಹೊಗಳಿದ ಘಟನೆ ಕುಂದಗೋಳದಲ್ಲಿ ನಡೆದಿದೆ.

ಹೌದು ಕುಂದಗೋಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದ ಅನ್ನಪೂರ್ಣ ಅವರು ಬಹಳ ವರ್ಷಗಳಿಂದ ಇಡೀ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರನ್ನು ಹುರುದುಂಬಿಸಿ ಒಂದು ಕುಟುಂಬದಂತೆ ಎಲ್ಲರನ್ನೂ ನೋಡಿಕೊಂಡು ಹೋಗಿದ್ದರಂತೆ.ಈಗ ಅವರನ್ನು ಬೇರೇ ಕಡೆ ವರ್ಗಾವಣೆ ಮಾಡಿದ್ದರಿಂದ ನಿನ್ನೆ ಕುಂದಗೋಳದಲ್ಲಿ ಅನ್ನಪೂರ್ಣ ಮೇಡಂ ಅವರ ಬೀಳ್ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಆ ಒಂದು ಕಾರ್ಯಕ್ರಮ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. ಅಂಗನವಾಡಿ ಕಾರ್ಯಕರ್ತೆಯರು ಕಣ್ಣೀರು ಹಾಕಿ ಬೀಳ್ಕೊಟ್ಟರು.ಅದರ ಜೊತೆಗೆ ಅಧಿಕಾರಿ ಅನ್ನಪೂರ್ಣ ಅವರು ಕಣ್ಣೀರು ಹಾಕಿ ನಿಮ್ಮ ಪ್ರೀತಿಯ ಕೊಡುಗೆಯನ್ನು ನನ್ನ ಜೊತೆಗೆ ಉಡುಗೊರೆಯಾಗಿ ಕೊಂಡೊಯ್ತುತ್ತಿದ್ದೇನೆ ಎಂದು ಭಾವುಕರಾದರು.

ಇಂದಿನ ಕಾಲದಲ್ಲಿ ಯಾವುದೇ ಒಬ್ಬ ಅಧಿಕಾರಿ ಒಂದು ವರ್ಷ ಕೆಲಸ ಮಾಡಿದ್ದರೆ ಸಾಕು ಶಾಸಕರ ಬೆನ್ನು ಬಿದ್ದು ಅವರನ್ನ ವರ್ಗಾವಣೆ ಮಾಡಿಸಿ,ಬೇರೋಬ್ಬರನ್ನು ತಂದು ಕೂಡ್ರಿಸುವ ಕಾಲದಲ್ಲಿ ಇಂತಹ ಒಬ್ಬ ಮಹಿಳಾ ಅಧಿಕಾರಿ ಬೀಳ್ಕೊಡುವಾಗ ಕಣ್ಣೀರು ಹಾಕ್ತಾರೆಂದರೆ ಅವರ ಕಾರ್ಯ ವ್ಯೆಕರಿಯನ್ನ ಎತ್ತಿ ತೋರಿಸುತ್ತದೆ.ಅವರಿಗೊಂದು ಸಲಾಮ್…..,………,.

ಉದಯ ವಾರ್ತೆ ಕುಂದಗೋಳ.

9448334896


Share to all

You May Also Like

More From Author