ಮಹಾನಗರ ಪಾಲಿಕೆ ಡಿಡಿಟಿಪಿಯಲ್ಲಿ ಬ್ರಷ್ಟಾಚಾರ…..

Share to all

ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಡಿಡಿಟಿಪಿಯಲ್ಲಿ ನಡಿತಾ ಇದೆ ಅಂತೆ ಬ್ರಹ್ಮಾಂಡ ಬ್ರಷ್ಟಾಚಾರ.ಅಲ್ಲಿ ಕಳೆದ ಹಲವು ವರ್ಷಗಳಿಂದ ಹೇಳೋರ ಇಲ್ಲಾ. ಕೇಳೋರ ಇಲ್ಲಾ ಎನ್ನುವಂತಾಗಿದ್ದನ್ನ ಈಗ ಖಡಕ್ ಆಯುಕ್ತರ ವಾರ್ನಿಂಗ್ ಗೆ ಭಯ ಬಿದ್ದಿದ್ದಾರೆ.

ಉದಯ ವಾರ್ತೆ ಡಿಡಿಟಿಪಿ ಮೇಡಂ ಅವರನ್ನ ಭೇಟಿಯಾಗಲು ಹೋದರೆ ಯಾರೀ ನೀವು? ಓಹ್! ರಿಪೋರ್ಟರಾ ಇಲ್ಲಿ ಯಾಕ್ರೀ ಏನರ ಇದ್ದರ ಹೇಳ್ರೀ ಅನ್ನುತ್ತಾ ನಾ..ನಿಮ್ಮನ್ನ ನೋಡೇ ಇಲ್ಲಲ್ಲರೀ ಅಂತಾ ಮಾತಿಗಿಳಿದ ಮೇಡಂ.ಏನ್ರೀ ಮೇಡಂ ನಿಮ್ಮ ಇಲಾಖೆಯಲ್ಲಿ ಬ್ರಷ್ಟಾಚಾರ ಅಂತಾ ಕೇಳತಾ ಇದ್ದಾಂಗೆ ಎದ್ದು ನಿಂತು ನೀರು ಕುಡಿದ ಮೇಡಂ ಸಾವಕಾಶವಾಗಿ ಏನ್ ಮಾಡಾಕ್ ಆಗುತ್ತೇ ಹೇಳ್ರೀ.ಒಂದ ಹಂಗು ಇರುತ್ತ.ಒಂದ ಹಿಂಗೂ ಇರುತ್ತ.ಐದು ಬೆರಳು ಸಮ ಇರತವೇನ್ರೀ ಅಂತಾ ನಡೀತಾ ಇರುವ ಬ್ರಷ್ಟಾಚಾರವನ್ನ ಮೌಖಿಕವಾಗಿ ಒಪ್ಪಿಕೊಳ್ಳುವ ಮೂಲಕ ನಮ್ಮನ್ನೇ ಪ್ರಶ್ನೆ ಮಾಡುವ ಮೇಡಂ ನಮ್ಮಲ್ಲಿ ವಾಯಲೇಷನ್ ನಾವು ಸಿಸಿ ಕೊಡುವಾಗ ಇರುದಿಲ್ಲರೀ ಆ ಮೇಲೆ ಕಟ್ಟಿಕೊಳ್ಳತಾರೀ ಅಂತಾ ಏನ್ರೀ ಮೇಡಂ ನಿಮ್ಮ ಹೇಳಿಕೆ ಮೆಚ್ಚಲೇ ಬೇಕು.

ಆ ಮೇಲೆ ನಿಮ್ಮ ಸೆಕ್ಷನ್ ದಲ್ಲಿ ಯಾರಿಗೆ ಯಾವ ವಲಯ ಕೊಟ್ಟಿರುತ್ತೀರಿ ಅದನ್ನ ಬಿಟ್ಟು ಬೇರೆ ಬೇರೆ ಕಡೆ ನಿಮ್ಮ ಇಂಜನೀಯರಗಳು ಕ್ಯೆ ಹಾಕ್ತಾರಲ್ಲರೀ ಅಂದರೆ ಹಂಗೇನಿಲ್ಲರೀ ಅವರ ಅವರ ಜಾವಾಬ್ದಾರಿ ಅವರೇ ನಿಭಾಯಿಸತಾರೆ ಅಂತಾ ಹೇಳಿದ ಮೇಡಂ ವಲಯ ಕಛೇರಿ 7 ರ ಕೆಲವು …ಶ್ರೇ…ದಂತಹ ಸಿಸಿ ಅಂದಾಕ್ಷಣ ಇಲ್ಲಾ ಅವುಗಳನ್ನ ನಾನೇ ಹೇಳಿ ಅರ್ಜಂಟ್ ಇದ್ದದ್ದವು ಮಾಡಲಿಕ್ಕೆ ಹೇಳಿದ್ದೇ ಅಂದರೆ ಹೆಂಗೆ ಮೇಡಂ.

ಇಂತಹ ಹತ್ತು ಹಲವು ಪ್ರಕರಣಗಳು ಇವೆ.ಖಡಕ್ ಆಯುಕ್ತರು ಡಿಡಿಟಿಪಿಗೆ ಮೇಜರ್ ಸರ್ಜರಿ ಮಾಡಿ ಸಂಪೂರ್ಣ ತನಿಖೆ ಮಾಡಿದರೆ ಯಾರ..ಯಾರ ಹೂರುಣ ಏನಿದೆ ಅಂತಾ ಹೊರಬೀಳುತ್ತೇ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author