ಮೊರಾರ್ಜಿ ವಸತಿ ಶಾಲೆಯ ಕರ್ಮಕಾಂಡ ಬಟಾಬಯಲು..! ವಸತಿ ಶಾಲಾ ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕ, ವಾರ್ಡನ್ ಅನುಚಿತ ವರ್ತನೆ..!

Share to all

ಮೊರಾರ್ಜಿ ವಸತಿ ಶಾಲೆಯ ಕರ್ಮಕಾಂಡ ಬಟಾಬಯಲು..!
ವಸತಿ ಶಾಲಾ ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕ, ವಾರ್ಡನ್ ಅನುಚಿತ ವರ್ತನೆ..!

ಯಾದಗಿರಿ:- ಹೌದು ವಸತಿ ಶಾಲೆ ಅಂದರೆ ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಕರ ಮಡಿಲಿಗೆ ಹಾಕಿ ನಮ್ಮ ಮಕ್ಕಳಿಗೆ ನೀವೇ ದೇವರು ಅಂತಾ ಒಪ್ಪಿಸಿ ಹೋಗತಾರೆ..ಆದರೆ ಈ ವಸತಿ ಶಾಲೆಯಲ್ಲೊಬ್ಬ ಶಿಕ್ಷಕ ಮತ್ತು ವಾರ್ಡನ್ ತಾವು ಏನು ಅನ್ನೋದನ್ನು ಮರೆತು ವರ್ತಿಸುತ್ತಿದ್ದಾರೆ ಎನ್ನೋ ಆರೋಪ ಕೇಳಿ ಬಂದಿದೆ..

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗ್ರಾಮವೊಂದರಲ್ಲಿರುವ ವಸತಿ ಶಾಲೆಯ ಶಿಕ್ಷಕ ಮತ್ತು ವಾಡ್೯ನ್ ವಸತಿ ಶಾಲಾ ವಿದ್ಯಾರ್ಥಿನಿಯರ ಮೈ, ಕೈ,ಮುಟ್ಟೋದು.ವಿದ್ಯಾರ್ಥಿನಿಯರೊಂದಿಗೆ ಡಬಲ್ ಮಿನಿಂಗ್ ನಲ್ಲಿ‌ ಮಾತಾಡೋದು.ತಡರಾತ್ರಿ ವರೆಗೂ ವಿದ್ಯಾರ್ಥಿನಿಯರೊಟ್ಟಿಗೆ ಕಾಲ ಕಳೆಯೋದು,ತಾನೂ ತಿಂತಿರುವ ತಿನ್ನಿಸು ತನ್ನ ಬಾಯಿಂದ ವಿದ್ಯಾರ್ಥಿನಿ ಬಾಯಿಗಿಡೋದು ಮಾಡುವ ವಾಡ್೯ನ ವಿರುದ್ಧ ಯಾರೂ ಮತನಾಡದ ಸ್ಥಿತಿಯಲ್ಲಿದ್ದಾರೆ.

ಹಾಸ್ಟೇಲ್ ನಲ್ಲಿ ಪ್ರತಿವರ್ಷವೂ ಒಂದೊಂದು ಬ್ಯಾಚ್ ವಿದ್ಯಾರ್ಥಿನಿಯರೊಂದಿಗೂ ಅನುಚಿತ ವರ್ತನೆ ಮಾಡುತ್ತಿರುವ ಕಾಮುಕ ವಾಡ್೯ನ್
ಬಗ್ಗೆ ಹೇಳೋರು ಇಲ್ಲಾ ಕೇಳೋರು ಇಲ್ಲಾ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ.

ಬದಲಾಗಿ ಈ ವಿಚಾರ ಯಾರಿಗಾದ್ರೂ ಹೇಳಿದರೆ ಇಂಟರನಲ್ ಮಾರ್ಕ್ಸ್ ಕಟ್ ಮಾಡುವ ಬೆದರಿಕೆಯನ್ನೂ ಸಹ ವಾಡ್೯ನ್ ಹಾಕತಾನಂತೆ.

ಭಯದಿಂದ ಈ ವಿಚಾರ ಮಾತಾಡಲು ವಿದ್ಯಾರ್ಥಿನಿಯರು ಹಿಜರಿಯುತ್ತಿರುವುದು ಉದಯ ವಾರ್ತೆ ನ್ಯೂಸ್ ಕನ್ನಡಕ್ಕೆ ಲಬ್ಯವಾಗಿದೆ.ಇಂತಹ ಕಾಮುಕ ಶಿಕ್ಷಕ ಮತ್ತು ವಾಡ್೯ನ್ನಗಳನ್ನ ತಕ್ಷಣದಿಂದಲೇ ಸಸ್ಪೆಂಡ ಮಾಡಿ ವಸತಿ ಶಾಲೆಯ ಮಕ್ಕಳ ರಕ್ಷಣೆಯನ್ನ ಮಾಡಬೇಕಿದೆ

ಉದಯ ವಾರ್ತೆ ನ್ಯೂಸ್ ಕನ್ನಡ ಯಾದಗಿರಿ.


Share to all

You May Also Like

More From Author