ರೈತರ ಹೆಸರಲ್ಲಿ ಮಾಡಿದ ರಸ್ತೆಗೆ “ಜಿಜಿ ಮೇಟಿ” ಹೆಸರಿಗೆ ಕೋಟ್ಯಾಂತರ ದುಡ್ಡು…!!! ಕೋನರೆಡ್ಡಿಯವರೇ “ಈ ಮೇಟಿ ಯಾರೂ”…!?
ಹುಬ್ಬಳ್ಳಿ: ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಜಕ್ಕಡಿ ರಸ್ತೆಯನ್ನ ಮಾಡಿ ರೈತರಿಗೆ ಬಹಳ ಅನುಕೂಲ ಮಾಡೇನಿ ಎನ್ನುತ್ತಿರುವ ಶಾಸಕ ಕೋನರೆಡ್ಡಿಯವರಿಗೆ ಬಹುದೊಡ್ಡ ವಿಷಯವೊಂದು ಗೊತ್ತಿರಬೇಕೆಂಬ ಮಾಹಿತಿಯನ್ನ ಉದಯವಾರ್ತೆ ಹೊರ ಹಾಕುತ್ತಿದೆ.
ರೈತರ ಹೆಸರಿನಲ್ಲಿ ಮಾಡಿರುವ ರಸ್ತೆಗಳಿಗೆ ಕೋಟಿ ಕೋಟಿ ಹಣವನ್ನ ಜಿ.ಜಿ.ಮೇಟಿ ಹೆಸರಿನಲ್ಲಿ ತೆಗೆಯಲಾಗಿದೆ. ಇದು ರೈತರಿಗೆ ಗೊತ್ತಾ ಎಂಬುದನ್ನ ಶಾಸಕರು ಹೇಳಬೇಕಿದೆ.
ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಕಾಮಗಾರಿಯ ನಿಜ ಸತ್ಯವನ್ನ ಶಾಸಕರು ರೈತರಿಗೆ ಹೇಳದೇ ಹೋದರೆ, ರೈತಕುಲಕ್ಕೆ ಅವಮಾನ ಮಾಡಿದಂತಾಗುತ್ತದೆ ಎಂಬುದು ಸತ್ಯ.
ಮೇಟಿ ಅವರು ಯಾವ ಯಾವ ರಸ್ತೆಗೆ ಎಷ್ಟೇಷ್ಟು ಹಣವನ್ನ ತೆಗೆದಿದ್ದಾರೆ ಎಂಬುದನ್ನ ಶಾಸಕ ಎನ್.ಎಚ್.ಕೋನರೆಡ್ಡಿಯವರು ರೈತರ ಮುಂದೆ ಹೇಳಬೇಕು ಎಂಬುದು ಪ್ರಜ್ಞಾವಂತರ ಮಾತಾಗಿದೆ.