ತಂದೆಯ ಹೆಸರಲ್ಲಿ ಮಗನ ದರ್ಬಾರ್.ತಂದೆಯ ಪರವಾಗಿ ಪುತ್ರನಿಂದ ಕ್ಷೇತ್ರದಲ್ಲಿ ಅಧಿಕಾರ ದುರ್ಬಳಕೆ…?

Share to all

ತಂದೆಯ ಹೆಸರಲ್ಲಿ ಮಗನ ದರ್ಬಾರ್.ತಂದೆಯ ಪರವಾಗಿ ಪುತ್ರನಿಂದ ಕ್ಷೇತ್ರದಲ್ಲಿ ಅಧಿಕಾರ ದುರ್ಬಳಕೆ!

ಚಿಕ್ಕೋಡಿ:-ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿಯಿಂದ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ ?

ಹೌದು ತಂದೆ ಲಕ್ಷ್ಮಣ ಸವದಿ ಪರವಾಗಿ ಪುತ್ರ ಚಿದಾನಂದ ಸವದಿಯಿಂದ ಭೂಮಿ ಪೂಜೆ ಮಾಡುವ ಮೂಲಕ ಅಧಿಕಾರದ ದುರ್ಬಳಕೆ ಮಾಡಿಕೊಂಡಿದ್ದಾರೆ.
ಯಾವುದೆ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದಿದ್ದರೂ ಕ್ಷೇತ್ರದಲ್ಲಿ ತಂದೆಯ ಪರವಾಗಿ ದರ್ಬಾರ ನಡೆಸುತ್ತಿರುವ ಪುತ್ರ ಚಿದಾನಂದ ಸವದಿ.ತಂದೆಯ ಪರವಾಗಿ 50 ಲಕ್ಷ ರೂಪಾಯಿ ರಸ್ತೆ ಡಾಂಬರಿಕರಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ.
ಯಕ್ಕಂಚಿ ಗ್ರಾಮದಿಂದ ಮುಸಲ್ಯಾನ್ ಕೋಡಿವರೆಗೆ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ಮಂಜೂರಿಯಾಗಿದೆ.ಅದನ್ನು ಶಾಸಕ ಸವದಿ ಅವರು ಭೂಮಿ ಪೂಜೆ ಮಾಡಬೇಕಿತ್ತು.ಆದರೆ ತಂದೆಯ ಕೆಲಸವನ್ನ ಮಗ ಮಾಡಿದ್ದು ಕ್ಷೇತ್ರದ ಜನರ ಕಣ್ಣು ಕೆಂಪಾಗಿಸಿದೆ.
ಸಾಮಾನ್ಯವಾಗಿ ಕ್ಷೇತ್ರದ ಶಾಸಕ ತಾಲೂಕು ಅಥವಾ ಜಿಲ್ಲಾ ಪಂಚಾಯತಿ ಸದಸ್ಯರು ಅಥವಾ ಗ್ರಾಮ ಪಂಚಾಯತಿ, ಅಧ್ಯಕ್ಷರು ಪೂಜೆ ಸಲ್ಲಿಸಬೇಕು.
ಸರ್ಕಾರಿ ಯೋಜನೆಗೆ ಚಾಲನೆ ಅಥವಾ ಭೂಮಿ ಉದ್ಘಾಟನೆ ಮಾಡಲು ಸಾಂವಿಧಾನಿಕ ಹುದ್ದೆಯಲ್ಲಿ ಇರಬೇಕು
ಯಾವುದೆ ಹುದ್ದೆಯಲ್ಲಿ ಇಲ್ಲದಿದ್ದರೂ ತಂದೆಯ ಹೆಸರಲ್ಲಿ ಮಗ ದರ್ಬಾರ್ ನಡೆಸಿದ್ದಾರೆ.

ಶಾಸಕ ಸವದಿ ಪುತ್ರರ ಕಾರ್ಯವನ್ನು ಮಾಜಿ ಶಾಸಕ ಮಹೇಶ ಕುಮಠಳ್ಳಿ ಖಂಡಿಸಿದ್ದಾರೆ.ಬಿಜೆಪಿ ಸರ್ಕಾರ ಅವಧಿಯಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ 16.5 ಕೋಟಿ ಅನುದಾನ ತರಲಾಗಿತ್ತು.
ಆ ಹಣದಲ್ಲಿ ಯಕ್ಕಂಚಿ ಮುಸಲ್ಯಾನ ರಸ್ತೆ ಕಾಮಗಾರಿಯನ್ನು 07/02/2023 ಚಾಲನೆ ನೀಡಲಾಗಿದೆ.ಹಲವು ಕಾಮಗಾರಿಗಳು ಎಂಟು ತಿಂಗಳ ವರಿಗೆ ತಡೆಹಿಡಿದು. ಸಂವಿಧಾನಾತ್ಮಕ ಯಾವುದೇ ಹುದ್ದೆಯಲ್ಲಿ ಇಲ್ಲದೆ ಇರುವರು ಚಾಲನೆ ನೀಡಿದ್ದಾರೆ. ಅಥಣಿಯಲ್ಲಿ ದಬ್ಬಾಳಿಕೆ ಆಡಳಿತ ನಡೆಯುತ್ತಿದೆ ಇದನ್ನು ಖಂಡನೆ ಮಾಡುತ್ತೇವೆ ಎಂದರು.

ಉದಯ ವಾರ್ತೆ ಚಿಕ್ಕೋಡಿ


Share to all

You May Also Like

More From Author