ಪ್ಲಾಸ್ಟಿಕ್ ಮುಕ್ತ ಹುಬ್ಬಳ್ಳಿ-ಧಾರವಾಡದತ್ತ ಪಾಲಿಕೆಯ ಹೆಜ್ಜೆ..ದೆಹಲಿಯ ಭಾರತ ಮಂಟಪದಲ್ಲಿ ಮಿಂಚಿದ ಪಾಲಿಕೆಯ ಪ್ರಶಂಟೇಷನ್..

Share to all

′

Oplus_16777216

ಪ್ಲಾಸ್ಟಿಕ್ ಮುಕ್ತ ಹುಬ್ಬಳ್ಳಿ-ಧಾರವಾಡದತ್ತ ಪಾಲಿಕೆಯ ಹೆಜ್ಜೆ..ದೆಹಲಿಯ ಭಾರತ ಮಂಟಪದಲ್ಲಿ ಮಿಂಚಿದ ಪಾಲಿಕೆಯ ಪ್ರಶಂಟೇಷನ್..

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಮೀಷನರ್ ಹಾಗೂ ಅಧಿಕಾರಿಗಳ ಪ್ಲಾಸ್ಟಿಕ್ ಮುಕ್ತ ನಗರ ಪ್ರಯತ್ನದ ಪ್ರಸಂಟೇಷನ್ನು ದೆಹಲಿಯ ಭಾರತ ಮಂಟಪದಲ್ಲಿ ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದಾರೆ.

ಈ ಒಂದು ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಮೀಷನರ್ ರುದ್ರೇಶ. ಘಾಳಿ..ಮೇಯರ್ ರಾಮಣ್ಣ ಬಡಿಗೇರ..ಇಇ ವಿಜಯಕುಮಾರ ಭಾಗವಹಿಸಿದ್ದರು.

Oplus_16777216

ಏನದು ಪ್ಲಾಸ್ಟಿಕ್ ಮುಕ್ತ ಪ್ರಸಂಟೇಷನ್……

ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಪ್ಲಾಸ್ಟಿಕ್ ಬಳಸುವ ಮೂಲಕ ಏಕಬಳಕೆಯ ಪ್ಲಾಸ್ಟಿಕ್‌ನಿಂದ ಪರಿಸರಕ್ಕಾಗುವ ಹಾನಿಯನ್ನು ತಪ್ಪಿಸುವುದರ ಜೊತೆಗೆ, ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಕೂಡ ಬಳಕೆ ಮಾಡಿಕೊಳ್ಳಬಹುದು.

 

ಹುಬ್ಬಳ್ಳಿ – ಧಾರವಾಡದ ಪ್ರತಿ ಮನೆ ಮನೆಯಿಂದ ದಿನ ನಿತ್ಯ ಕಸ‌ ಸಂಗ್ರಹಿಸುವ ಪಾಲಿಕೆ, ಅದನ್ನು ಮೊದಲು ಕಾಂಪ್ಯಾಕ್ಟರಿ ಸ್ಟೇಷನ್‌ಗೆ ಕೊಂಡೊಯ್ಯುತ್ತದೆ. ಅಲ್ಲಿ ರಸ್ತೆ ನಿರ್ಮಾಣಕ್ಕೆ ಬಳಸಬಹುದಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕಿಸಿ,
ಶ್ರೆಡ್ಡಿಂಗ್ ಮೆಷಿನ್ ಸಹಾಯದಿಂದ ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡಿ ಡಾಂಬರ್ ಮಿಶ್ರಣ ಘಟಕಕ್ಕೆ ಕಳುಹಿಸಿಕೊಡಲಾಗುತ್ತದೆ.
ಈ ಪ್ಲಾಸ್ಟಿಕ್ ತುಂಡುಗಳನ್ನು ಡಾಂಬಾರು ಮಿಶ್ರಣ ಘಟಕದಲ್ಲಿ ಜೆಲ್ಲಿ ಮತ್ತು ಟಾರಿನ ಮಿಶ್ರಣದ ಜೊತೆ ಸೇರಿಸಲಾಗುತ್ತದೆ. ಬಿಟುಮಿನ್‌ ಜತೆಗೆ ಶೇ 8ರಷ್ಟು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮಿಶ್ರಣ ಮಾಡಲಾಗುತ್ತದೆ. ಇದರಿಂದ ರಸ್ತೆಗಳ ದೃಢತೆ ಹೆಚ್ಚುವುದಲ್ಲದೇ, ರಸ್ತೆ ಮೇಲೆ ನೀರು, ಬಿಟುಮಿನ್‌ ಹಾಳಾಗಿ, ಗುಂಡಿ ಬೀಳುವುದನ್ನು ಪ್ಲಾಸ್ಟಿಕ್ ತಪ್ಪಿಸುತ್ತದೆ.

ಅಲ್ಲದೇ, ಸಾಮಾನ್ಯ ಡಾಂಬಾರು ರಸ್ತೆಗಿಂತ, ಪ್ಲಾಸ್ಟಿಕ್ ರಸ್ತೆಗೆ ಪ್ರತಿ ಒಂದು ಕಿಲೋ ಮೀಟರ್‌‌ಗೆ ₹1.5 ಲಕ್ಷ ಹಣ ಉಳಿತಾಯವಾಗಲಿದೆ.

ಮುಂದಿನ ದಿನಗಳಲ್ಲಿ ಪಾಲಿಕೆ ವತಿಯಿಂದ ನಿರ್ಮಾಣವಾಗುವ ಎಲ್ಲಾ‌ ರಸ್ತೆಗಳಲ್ಲೂ ತ್ಯಾಜ್ಯ ಪ್ಲಾಸ್ಟಿಕ್ ಅನ್ನು ಬಳಕೆ ಮಾಡಲು ಚಿಂತಿಸಲಾಗುತ್ತಿದೆ.

” ಪ್ಲಾಸ್ಟಿಕ್ ತ್ಯಾಜ್ಯವು ಪರಿಸರವನ್ನು ಕಲುಷಿತಗೊಳಿಸುವುದನ್ನು ತಪ್ಪಿಸಲು ಅದನ್ನು ರಸ್ತೆ ನಿರ್ಮಾಣಕ್ಕಾಗಿ ಮರುಬಳಕೆ ಮಾಡಲಾಗುತ್ತಿದೆ.

ಪ್ಲಾಸ್ಟಿಕ್ ತ್ಯಾಜ್ಯವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ರಸ್ತೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುವ ಸಂಪನ್ಮೂಲವಾಗಿ ಪರಿವರ್ತಿಸಿದೆ”

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author