ಮಳೆಯಿಂದಾಗುವ ಅನಾಹುತ ತಪ್ಪಿಸಲು ಪಾಲಿಕೆಯ ಮಂಜಾಗೃತಾ ಕ್ರಮಗಳು.

Share to all

ಮಳೆಯಿಂದಾಗುವ ಅನಾಹುತ ತಪ್ಪಿಸಲು ಪಾಲಿಕೆಯ ಮಂಜಾಗೃತಾ ಕ್ರಮಗಳು.

ಹುಬ್ಬಳ್ಳಿ-ಧಾರವಾಡದಲ್ಲಿ ಸುರಿದ ಅತಿವೃಷ್ಟಿ ಮಳೆಯಿಂದಾಗಿ ನಗರದಲ್ಲಿ ಹಲವು ಕಡೆ ಅಸ್ಥವ್ಯಸ್ತ ಉಂಟಾಗಿದ್ದು. ಹವಾಮಾನ ಇಲಾಖೆ ವರದಿಯ ಪ್ರಕಾರ ಇನ್ನೂ ಎರಡು ದಿನ ಮಳೆ ಜಾಸ್ತಿಯಾಗಲಿದ್ದು ಯಾರ ಜೀವಕ್ಕೂ ಹಾನಿಯಾಗ ಬಾರದು ಅಂತ ಪಾಲಿಕೆ ಅಗತ್ಯ ಕ್ರಮಗಳನ್ನ ಕೈಗೊಂಡಿದೆ.. ಪ್ರಾಣಾಪಾಯ ತಪ್ಪಿಸಲು ಪಾಲಿಕೆ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಸುಮಾರು 40 ಕಡೆ ಕಾಳಜಿ ಕೇಂದ್ರಗಳನ್ನ ಸ್ಥಾಪಿಸಿದೆ. ಪ್ರತೀ ವಯಲಕ್ಕೂ ಒಂದು ಜೆಸಿಬಿ ಮತ್ತು ಆಪರೇಟರ್​ಗಳನ್ನ ಸಿದ್ದಪಡಿಸಲಾಗಿದೆ.ಅವಶ್ಯಕತೆಯಿರೋ ಕಡೆ ಹೆಚ್ಚುವರಿ ಜೆಸಿಬಿಯ ವ್ಯವಸ್ಥೆ ಮಾಡಲಾಗಿದೆ. 12 ಜೆಟ್ಟಿಂಗ್​ ಮಷೀನ್​ಗಳು, 12 ವಾಟರ್​ ರೋಲಿಂಗ್​ ಮಷೀನ್​ಗಳು ಹಾಗೂ ಪ್ರತೀ ವಲಯಕ್ಕೂ 10 ಜನರ ಟಾಸ್ಕ್​ ಪೋರ್ಸ್​ ತಂಡಗಳನ್ನ ರಚನೆ ಮಾಡಿ, ತಂಡದ ಸದಸ್ಯರಿಗೆ ಬೇಕಾದ ಅಗತ್ಯ ಸಲಕರಣೆಗಳಾದ ರೋಪ್, ಟಾರ್ಚ್​ ಹಾಗೂ ಮೆಡಿಕಲ್ ಕಿಟ್ ಗಳನ್ನ ಪಾಲಿಕೆ ಒದಗಿಸಿದೆ. ಈ ಮೂಲಕ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅತಿವೃಷ್ಟಿ ಮಳೆಯಿಂದಾಗುವ ಅನಾಹುತ ತಪ್ಪಿಸಲು ಎಲ್ಲಾ ಅಗತ್ಯ ಮಂಜಾಗ್ರತಾ ಕ್ರಮಗಳನ್ನ ಕೈ ಗೊಂಡಿದೆ

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author