ಹಲವು ವರ್ಷಗಳಿಂದ ಠೀಕಾಣಿ ಹೂಡಿದ ಅಧಿಕಾರಿಗಳ ಲಿಸ್ಟ್ ರೆಡಿ..ನಾಳೆ ಸಂಜೆಯೊಳಗೆ ಟ್ರಾನ್ಸ್ ಪರ್ ಆಡ್೯ರ್ ರಿಲೀಸ್..ಅಧಿಕಾರಿಗಳಲ್ಲಿ ಡವ..ಡವ..
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಹಲವು ವರ್ಷಗಳಿಂದ ಗೂಟಾ ಜಡಿದುಕೊಂಡು ಕುಳಿತಿರುವ ಅಧಿಕಾರಿಗಳ ವರ್ಗಾವಣೆಯ ಲಿಸ್ಟ್ ರೆಡಿ ಆಗಿದ್ದು ನಾಳೆ ಸಂಜೆಯೊಳಗೆ ವರ್ಗಾವಣೆ ಆದೇಶ ಹೊರಬೀಳಲಿದೆ.
ಮಹಾನಗರ ಪಾಲಿಕೆಯಲ್ಲಿ ಡೆಪಿಟೇಷನ್ ಅವದಿ ಮೀರಿದ ಅನ್ಯ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುವ ಅಧಿಕಾರಿಗಳು ಕಳೆದ ಐದು ವರ್ಷಗಳಿಂದ ಮಹಾನಗರ ಪಾಲಿಕೆಯಲ್ಲಿಯೇ ಕುಳಿತಿರುವವರ ಲಿಸ್ಟ್ ಬೆಂಗಳೂರಿನಲ್ಲಿ ರೆಡಿ ಆಗಿದ್ದು ನಾಳೆ ಸಂಜೆಯೊಳಗೆ ಆದೇಶ ಹೊರಬೀಳಲಿದೆ.
ಈಗಾಗಲೇ ಐದು ವರ್ಷಕ್ಕಿಂತ ಹೆಚ್ಚಿಗೆ ಅವಧಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಠೀಕಾಣಿ ಹೂಡಿರುವ ಹಲವು ಅಧಿಕಾರಿಗಳು ಹುಬ್ಬಳ್ಳಿ ಪಾಲಿಕೆಯಲ್ಲಿಯೇ ಮುಂದುವರೆಯಲು ಸೂಟ್ ಕೇಸ್ ಸಮೇತ ಬೆಂಗಳೂರ ಟಿಕೆಟ್ ತೆಗೆಸಿಕೊಂಡು ರೆಡಿ ಆಗಿದ್ದಾರೆ.