ಸಬರದ ಸಾಹೇಬ್ರಿಗೆ ಈ ಸಲ ಟಿಕೆಟ್ ಗ್ಯಾರಂಟಿ…! ಪಾಲಿಕೆ ಬಿಟ್ಟು ಹೋಗೋದು ಪಕ್ಕಾ…ಅವರನ್ನ ರಿಲೀವ್ ಮಾಡದಿದ್ದರೆ ನಡೆದಿದೆ ಬೇರೊಂದು ಪ್ಲ್ಯಾನ್….

Share to all

ಸಬರದ ಸಾಹೇಬ್ರಿಗೆ ಈ ಸಲ ಟಿಕೆಟ್ ಗ್ಯಾರಂಟಿ…! ಪಾಲಿಕೆ ಬಿಟ್ಟು ಹೋಗೋದು ಪಕ್ಕಾ…ಅವರನ್ನ ರಿಲೀವ್ ಮಾಡದಿದ್ದರೆ ನಡೆದಿದೆ ಬೇರೊಂದು ಪ್ಲ್ಯಾನ್….

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಗ್ರೀನ್ ಇಂಕ್ ಅಂದರೆ ಬಂಗಾರದ ಕಡ್ಡಿ ಇದ್ದಂಗೆ ಅಂತಾ ಕೆಲವರು ಅಂದುಕೊಂಡಿದ್ದಾರೆ.ಹಾಗಂದುಕೊಂಡೇ ಕಳೆದ ಹತ್ತಾರು ವರ್ಷಗಳಿಂದ ಗೂಟಾ ಜಡಿದುಕೊಂಡು ಕುಳಿತಿದ್ದಾರೆ.

ಅದರಲ್ಲಿ ಎಂ ಬಿ ಸಬರದ ಸಹ ಒಬ್ಬರು.ಇವರು ಇರುವುದೇ ಅಕ್ರಮ ಹುದ್ದೆಯಲ್ಲಿ.ಇವರು ಸಮುದಾಯ ಸಂಘಟನಾಧಿಕಾರಿ.ಸಿ ದರ್ಜೆಯ ನೌಕರರು ಅಷ್ಟೇ ಅಲ್ಲದೇ ಅವರಿಗೆ ಒಂದುಜೋನಲ್ ಕಮೀಷನರ್ ಇನ್ನೊಂದು ಕಂದಾಯ ಅಧಿಕಾರಿ ಹುದ್ದೆ..

 

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅಕ್ರಮವಾಗಿ ಕಂದಾಯ ಅಧಿಕಾರಿಯಾಗಿರುವ M.B.ಸಬರದ ಸಾಹೇಬ್ರು ಮಹಾನಗರ ಪಾಲಿಕೆಯಲ್ಲಿ ಯಾವ ಹುದ್ದೆಯಲ್ಲಿದ್ದಾರೆ ಅನ್ನೋದು ಪ್ರಶ್ನೆ.ಯಾಕೆಂದರೆ ಇವರನ್ನ ಕಳೆದ 02-08-2023 ಕ್ಕೆ ಪಾಲಿಕೆಯಿಂದ ಬಿಡುಗಡೆಗೊಳಿಸಿ ಪೌರಾಡಳಿತ ಸೇವೆಗೆ ಹಿಂದಿರುಗಿಸಿದ್ದಾರೆ.ಅಲ್ಲದೇ ನಗರಾಭಿವೃದ್ಧಿ ಇಲಾಖೆಯ ಪೌರ ಸೇವಾ ಶಾಖೆಗೆ ಹಾಜರಾಗುವಂತೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.

ಆದರೂ ಸಹ ಇವರು ಪಾಲಿಕೆಯಲ್ಲಿ ಎರಡೆರಡು ಹುದ್ದೆ ಅನಭವಿಸುತ್ತಿದ್ದಾರೆ.ಇವರಿಗೆ ಪಗಾರ ಆದರೂ ಹೆಂಗೆ ಕೊಟ್ಟರು..ಸರಕಾರವಾದರೂ ಆದೇಶ ಮಾಡಿ‌ ಸುಮ್ನೇ ಯಾಕೆ ಕುಳಿತರು ಹತ್ತು ಹಲವಾರು ಪ್ರಶ್ನೆಗಳು ಇವೆ.

ಇಂತಹ ಮಹಾನ ವ್ಯಕ್ತಿ ಎಂ ಬಿ ಸಬರದ ಅವರಿಗೆ ಸರಕಾರ ಈಗ ಮತ್ತೆ ಪಾಲಿಕೆಯಿಂದ ವರ್ಗಾವಣೆ ಮಾಡಿ ಆದೇಶ ಮಾಡಿದೆ.ಈ ಸಲವಾದರೂ ಖಡಕ್ ಕಮೀಷನರ್ ಸಾಹೇಬ್ರು ಇವರನ್ನ ರಿಲೀವ್ ಮಾಡತಾರಾ ಇಲ್ಲಾ ಇವರೂ ಹಂಗೇನಾ ನೋಡಬೇಕು.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author