ಪಂಚಮಸಾಲಿ ಸ್ವಾಮೀಜಿ ತಲೆ ಮೇಲೆ ತೂಗುಗತ್ತಿ…ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಸಿಡಿದೆದ್ದ ಪಂಚಮಸಾಲಿ ಟ್ರಸ್ಟ್.

Share to all

ಪಂಚಮಸಾಲಿ ಕೂಡಲ ಸಂಗಮ ಪೀಠದ ಸ್ವಾಮೀಜಿ ತಲೆ ಮೇಲೆ ತೂಗುಗತ್ತಿ…ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಸಿಡಿದೆದ್ದ ಪಂಚಮಸಾಲಿ ಟ್ರಸ್ಟ್.

ಹುಬ್ಬಳ್ಳಿ:-ಕೂಡಲ ಸಂಗಮ ಪೀಠದ ಪಂಚಮಸಾಲಿ ಸ್ವಾಮೀಜಿ ಜಯಮೃತ್ಯುಂಜಯ ಸ್ವಾಮೀಜಿಗಳ ಉಚ್ಚಾಟನೆಗೆ ಕ್ಷಣ ಗಣನೆ ಆರಂಭಾವಾಯತಾ ಅನ್ನೋ ಅನುಮಾನ ಮೂಡತಾ ಇದೆ..ಈ ಬಗ್ಗೆ ಮಹತ್ವದ ಸುದ್ದಿಗೋಷ್ಠಿಯೊಂದನ್ನ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಕರೆದಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಲಿರುವ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ.
ಮೊನ್ನೆ ತಾನೆ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ್ದ ಟ್ರಸ್ಟ್.
ಬೀಗ ಒಡೆದು ಸ್ವಾಮೀಜಿ ಬೆಂಬಲಿಗರು ಒಳಪ್ರವೇಶ ಮಾಡಿದ್ದರು..

ಆ ಹಿನ್ನೆಲೆಯಲ್ಲಿ ಸ್ವಾಮೀಜಿಗಳ ಬೆಂಬಲಿಗರ ವಿರುದ್ಧ ದೂರನ್ನೂ ಸಹ ಟ್ರಸ್ಟ್ ನ ಸದಸ್ಯರು ನೀಡಿದ್ದರು.ಈ ನಡುವೆ ಸ್ವಾಮೀಜಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಟ್ರಸ್ಟ್ ಮುಂದಾಗಿದೆ.

ಇದೆಲ್ಲದರ ಮದ್ಯೆ ಇಂದು ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಟ್ರಸ್ಟ್ ಅದ್ಯಕ್ಷ ವಿಜಯಾನಂದ ಕಾಶಪ್ಪನವರ ಹುಬ್ಬಳ್ಳಿಯಲ್ಲಿ ಸುದ್ದಿಗೊಷ್ಠಿ ಕರೆದಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author