ಹನ್ನೊಂದು ವರ್ಷ ಭೂಗತ ಆರೋಪಿ ಆರೆಸ್ಟ್..ಬಹುಮಾನ ಘೋಷಿಸಿದ ಎಸ್ ಪಿ.
ಹುಬ್ಬಳ್ಳಿ:-ಕಳೆದ ಹನ್ನೊಂದು ವರ್ಷಗಳಿಂದ ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡಿದ್ದ ಭೂಗತ ಆರೋಪಿಯೊಬ್ಬನನ್ನು ಆರೆಸ್ಟ್ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಇನ್ಸ್ಪೆಕ್ಟರ್ ಹಾಗೂ ತಂಡ ಯಶಶ್ವಿಯಾಗಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದ ಪ್ರಕಾಶ ಹಂಚಿನಮನಿ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.ಬಂಧಿತ ಆರೋಪಿ ಕುಟುಂಬದವರಿಗೂ ತನ್ನ ಇರುವಿಕೆಯ ಮಾಹಿತಿಯನ್ನು ನೀಡದೇ ಬೇರೆಯವರ ಹೆಸರಿನಲ್ಲಿ ಸಿಮ್ ಪಡೆದು ತಲೆಮರೆಸಿಕೊಂಡಿದ್ದ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ವಾಸವಾಗಿದ್ದ ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಪೋಲೀಸರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.2014 ರಲ್ಲಿ ಪಕ್ಕದ ಮನೆಯವರೊಬ್ಬರ ಮೇಲೆ ಹಲ್ಲೆ ಹಾಗೂ ಕಳ್ಳತನ ಆರೋಪದಲ್ಲಿ ಬಂಧಿತನಾಗಿದ್ದ.
ಈತನ ಬಂಧಿಸುವಲ್ಲಿ ಸಿಪಿಆಯ್ ಮುರಗೇಶ.ಚನ್ನಣ್ಣವರ ನೇತೃತ್ವದಲ್ಲಿ ಚನ್ನಪ್ಪ ಬಳ್ಳೊಳ್ಳಿ ಹಾಗೂ ತಿಪ್ಪಣ್ಣ ಆಲೂರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಲಾಂಗ್ ಪೆಂಡಿಂಗ್ ಕೇಸ್ ಬೇಧಿಸಿದ ಪೋಲೀಸರಿಗೆ ಎಸ್ ಪಿ ಗುಂಜನ್ ಆರ್ಯ ಬಹುಮಾನ ಘೋಷಿಸಿದ್ದಾರೆ.