ಹುಬ್ಬಳ್ಳಿ ಎಪಿಎಂಸಿ ಅಧಿಕಾರಿಗಳಿಗಿಲ್ಲಾ ಟ್ರಾನ್ಸ್ ಪರ್ ಗೈಡ್ ಲೈನ್ಸ್…ಒಂದಾ..ಎರಡಾ..ದಶಕಗಳ ಕಾಲ ಒಂದೇ ಕಡೆ…
ಹುಬ್ಬಳ್ಳಿ:-ಅವರಿಗೆ ಸರಕಾರದ ವರ್ಗಾವಣೆಯ ಗೈಡ್ ಲೈನ್ ಇಲ್ಲವೇ ಇಲ್ಲಾ..ಸಚಿವರೇ ಈ ಕಡೆ ಒಮ್ಮೆ ನೋಡಿ…ಅನ್ನೋ ಪರಿಸ್ಥಿತಿ ಬಂದಿದೆ.ಹತ್ತಕ್ಕೂ ಹೆಚ್ಚು ವರ್ಷಗಳಿಂದ ಒಂದೇ ಕಡೆ ಗೂಟಾ ಜಡಿದುಕೊಂಡು ಕುಳಿತರೂ ಹಿರಿಯ ಅಧಿಕಾರಿಗಳೂ ಗಪ್ ಚುಪ್..

ಆ ಇಲಾಖೆಯಲ್ಲಿ ಅವರು ಹೇಳಿದ್ದೇ ಕಾನೂನು ಆಡಿದ್ದೇ ಆಟ..ಅದುವೇ ಏಷಿಯಾದಲ್ಲಿಯೇ ದೊಡ್ಡ ಮಾರುಕಟ್ಟೆ ಅಂತಾ ಕರೆಯಿಸಿಕೊಳ್ಳುವ ಹುಬ್ಬಳ್ಳಿ APMC.ಅವರು ಯಾರು ಅಂತೀರಾ ತೋರಿಸ್ತೇವಿ ಹೇಳ್ತೇವಿ ನೋಡಿ..
ಅರೇರೇ ಇವರನ್ನೆಲ್ಲೇ ನೋಡಿದ್ದೇವಿ ಅಂತೀರಾ….ನೋ..ನೋ…ಇವರು ಯಾರ ಕಣ್ಣಿಗೂ ಕಾಣಲ್ಲಾ..ಏಶಿಯಾದಲ್ಲಿಯೇ ದೊಡ್ಡ ಮಾರುಕಟ್ಟೆ ಅಂತಾ ಕರೆಯಿಸಿಕೊಳ್ಳುವ ಹುಬ್ಬಳ್ಳಿಯ APMC ಮಾರುಕಟ್ಟೆಯ ಇಲಾಖೆಯಲ್ಲೇ ಕುಂತಲ್ಲೇ ಮಂಗ್ಯಾನ ಆಟ ಆಡಿಸೋರು..
ಈ ಅಧಿಕಾರಿಗಳು ಹತ್ತಕ್ಕೂ ಹೆಚ್ಚು ವರ್ಷಗಳ ಕಾಲ ಒಂದೇ ಕಡೆ ಇದ್ದರೂ ಈ ಇಲಾಖೆಯ ಸಚಿವರು ಕಣ್ಣಿದ್ದು ಕುರುಡರಾದರಾ..ಅಥವಾ ಬೇರೇನಾ..? ಅನ್ನೋ ಸಂಶಯ ಮೂಡತಾ ಇದೆ…ಈ ಅಧಿಕಾರಿಗಳನ್ನ ಕಂಡರೆ ಮಾರುಕಟ್ಟೆಯ ಹಮಾಲರು…ಅಂಗಡಿಕಾರರು ಮತ್ತೆ ಬೇರೆ ಬೇರೆ ಜನರು ಗಡ ಗಡ ಅಂತಾರಂತೆ ಹಾಗಾದರೆ ಅವರು ಯಾರು..? ಅಂತೀರಾ ಇವರೇ ನೋಡಿ….

ಇವರನ್ನ ನೋಡಿದರೇ ರೆಡ್ ಟೀ ಶಟ್೯ ಹಾಕೊಂಡು ಸೇಮ್ ಫಿಲ್ಮ್ ಆ್ಯಕ್ಟರ ತರಾನೇ ಇರೋ ಆರೀಪ್ ಯಾದವಾಡ ಅಂತಾ…APMC ಯಲ್ಲಿ ಮಾರುಕಟ್ಟೆ ಮೇಲ್ವಿಚಾರಕರು ಅಂತಾ ಕೆಲಸ ಮಾಡತಾ ಇದ್ದಾರೆ..ಇವರು ಮೇ 26..1994 ರಿಂದ ಸಪ್ಟಂಬರ್ 11.2002 ರವರೆಗೆ ಹುಬ್ಬಳ್ಳಿಯಲ್ಲೇ ಕೆಲಸ..ನಂತರ 19-02-2002 ರಿಂದ 3-9-2007 ರವರೆಗೆ ಐದು ವರ್ಷಗಳ ಕಾಲ ಸವದತ್ತಿಯಲ್ಲಿ.ನಂತರ 4-09-2007 ರಿಂದ 31-08-2017 ರವರೆಗೆ ಒಂಬತ್ತು ವರ್ಷಗಳ ಕಾಲ ಶಿರಸಿಯಲ್ಲಿ ಮತ್ತೆ 2017 ಕ್ಕೆ ಹುಬ್ಬಳ್ಳಿಗೆ ಕಾಲಿಟ್ಟ ಇವರು ಇಲ್ಲಿಂದ ವಾಪಸ್ಸು ಹೋಗಿಯೇ ಇಲ್ಲಾ…ಹುಬ್ಬಳ್ಳಿಯಲ್ಲೇ ಹದಿನೈದು ವರ್ಷ ಸೇವೆ..ಇವರ ಸೇವೆ ಒಂದು ಕಡೆ ಆದರೆ ಇವರ ಇನ್ನೊಂದು ಮುಖವನ್ನ ಮುಂದಿನ ಸಂಚಿಕೆಯಲ್ಲಿ ವೀಕ್ಷಿಸಿ…

ಇನ್ನೂ ಇವರನ್ನ ನೋಡಿದರೇ ನಿಮಗೆ ಖಂಡಿತಾ ಚಿತ್ರ ನಟ ರಜನೀಕಾಂತ ತರಾನೇ ಕಾಣಿಸ್ತಾರ ಅಲ್ವಾ..ಹೌದ್ರೀ ಪಿಲ್ಮ್ ಆ್ಯಕ್ಟರ್ ಆಗಿರಲಿಕ್ಕಿಲ್ಲಾ ಆದರೆ ಹುಬ್ಬಳ್ಳಿ APMC ಯಲ್ಲಿ ಇವರು ಸ್ಟಾರ್… ಇವರ ಹೆಸರು ಬಸವರಾಜ ವೀರಪ್ಪ ನೇಸರಗಿ ಅಂತಾ ಇವರು ಹುಬ್ಬಳ್ಳಿ APMC ಯಲ್ಲಿ 26-6-2014 ರಿಂದ ಅಂದರೆ ಹದಿನಾಲ್ಕು ವರ್ಷಗಳಿಂದ ಗೂಟಾ ಜಡಿದುಕೊಂಡು ಕುಳಿತಿದ್ದಾರೆ..
