ಹಾಡು ಹಗಲೇ 7.11 ಕೋಟಿ ಹಣ ದರೋಡೆ ಪ್ರಕರಣ…ದರೋಡೆಯ ಸೂತ್ರದಾರ ಪೋಲೀಸ್..?
ಬೆಂಗಳೂರು:- CMS ವಾಹನವನ್ನು ಹಾಡು ಹಗಲೇ ಅಡ್ಡಗಟ್ಟಿ 7.11 ಕೋಟಿ ದರೋಡೆ ನಡೆಸಿದ್ದ ಪ್ರಕರಣದ ಪ್ರಮುಖ ಸೂತ್ರದಾರ ಪೋಲೀಸ ಎಂಬುದಾಗಿ ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ದರೋಡೆ ಪ್ರಕರಣದ ಜಾಡು ಹಿಡಿದು ತನಿಖೆ ತೀವ್ರಗೊಳಿಸುತ್ತಿದ್ದಂತೆ ಬೆಂಗಳೂರಿನ ಗೋವಿಂದಪುರ ಠಾಣೆಯ ಕಾನಸ್ಟೇಬಲ್ ಅಣ್ಣಪ್ಪ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಯಾರೂ ಈ ಕಾನಸ್ಟೇಬಲ್..?
ಸದ್ಯ ಗೋವಿಂದಪುರ ಠಾಣೆಯಲ್ಲಿ ಕಾನಸ್ಟೇಬಲ್ ಆಗಿರುವ ಅಣ್ಣಪ್ಪ ನಾಯಕ ಕುಂಬಳಗೋಡ ಪೋಲೀಸ ಠಾಣೆ ಸೇರಿದಂತೆ ಹಲವು ಪೋಲೀಸ ಠಾಣೆಗಳಲ್ಲಿ ಕೆಲಸ ಮಾಡಿದ್ದ.ಅವರ ಮೇಲೆ ಅನುಮಾನ ಬಲಗೊಂಡಿದ್ದು ವಿಚಾರಣೆ ನಡೆದಿದೆ.
ಈ ಕಾನಸ್ಟೇಬಲ್ ಬೇರೇ ಬೇರೆ ಕಡೆಯ ಹುಡುಗರಿಗೆ ಟ್ರೇನಿಂಗ್ ಕೊಟ್ಟು ದರೋಡೆಗೆ ಸಿದ್ದಪಡಿಸಿದ್ದ ಎನ್ನಲಾಗಿದೆ. ಪೋಲೀಸರ ತನಿಖೆ ಯಾವ ರೀತಿ ನಡೆಯುತ್ತೇ..ಅವರಿಂದ ತಪ್ಪುಸಿಕೊಳ್ಳೋದು ಹೇಗೆ ದರೋಡೆ ಮಾಡಿದ ಹಣ ಎಲ್ಲಿ ಇಡಬೇಕು ಅಂತಾ ವ್ಯವಸ್ಥಿತವಾಗಿ ಟ್ರೇನಿಂಗ್ ನೀಡಿದ್ದಾ ಎನ್ನಲಾಗಿದೆ.
ದರೋಡೆ ಪ್ರಕರಣದಲ್ಲಿ ಕಾನಸ್ಟೇಬಲ್ ಸೇರಿದಂತೆ ಸಿಎಂಎಸ್ ಸಂಸ್ಥೆಯ ಮಾಜಿ ಹಾಗೂ ಹಾಲಿ ಸಿಬ್ಬಂದಿಗಳನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.