ಅನಧಿಕೃತ ಕಟ್ಟಡದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್.. ಪಾಲಿಕೆ..ಪೋಲೀಸ..ಅಬಕಾರಿ ಪೋಲೀಸರೇ ಎಲ್ಲಿ..!

Share to all

ಅನಧಿಕೃತ ಕಟ್ಟಡದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್.. ಪಾಲಿಕೆ..ಪೋಲೀಸ..ಅಬಕಾರಿ ಪೋಲೀಸರೇ ಎಲ್ಲಿ..!

ಹುಬ್ಬಳ್ಳಿ:-ಪ್ರತಿಷ್ಠಿತ ವ್ಯಕ್ತಿಗಳು ಸಂಚರಿಸುವ ಗೋಕುಲ ರಸ್ತೆಯ ವಾಡ್೯ ನಂಬರ 30 ರ ವ್ಯಾಪ್ತಿಯಲ್ಲಿ ಬರುವ ಸೆಂಟ್ರಲ್ ಎಕ್ಸ್ಯೆಜ್ ಕಾಲೋನಿಯಲ್ಲಿ ತಾರಾ ಎಮರಾಲ್ಡ್ ಹೊಟೆಲ್ ನಲ್ಲಿ ಅನಧಿಕೃತ ಕಟ್ಟಡದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೀತಾ ಇದ್ದರೂ ಎಲ್ಲರೂ ಗಪ್ ಚುಪ್…

ಪ್ರತಿಷ್ಠಿತ ಈ ಹೊಟೆಲ್ ನ ನಾಲ್ಕನೇ ಮಹಡಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಫರ್ಮಿಷನ್ ಇಲ್ಲದಿದ್ದರೂ ಸಹ ಆ ಮಹಡಿಯಲ್ಲಿ ಹಲವು ವರ್ಷಗಳಿಂದ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಯುತ್ತಿದ್ದರೂ ಕೂಡಾ ಗೋಕುಲ ಪೋಲೀಸ ಠಾಣೆಯ ಪೋಲೀಸರಿಗಾಗಲಿ..ಪಾಲಿಕೆಯವರಿಗಾಗಲಿ ಅಬಕಾರಿಯವರಿಗೆ ಆಗಲಿ ಗೊತ್ತೇ ಇಲ್ಲಾ ಅನ್ನೋ ರೀತಿ ಇದ್ದಾರೆ.

ಆ ಮಹಡಿಯಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಅನಧಿಕೃತವಾಗಿ ನಡೆಸುತ್ತಿದ್ದು ಅಲ್ಲದೇ ಸುರಕ್ಷತಾ ಕ್ರಮಗಳಂತೂ ನೋಡಲಿಕ್ಕೂ ಸಿಗಲ್ಲಾ…

ರಾತ್ರೀ ಹತ್ತೂವರೆಯಾದರೆ ಡಬ್ಬಾ ಅಂಗಡಿಗಳಿಗೆ ಸೀಟಿ ಹೊಡೆಯುವ ಪೋಲೀಸರಿಗೆ ಈ ಬಾರ್ ಆ್ಯಂಡ್ ರೆಸ್ಟೋರೆಂಟ್ ಕಣ್ಣಿಗೆ ಕಂಡಂಗಿಲ್ವಾ ಅಥವಾ ಕಂಡರೂ ಸುಮ್ನೇನಾ…

ಇನ್ನೂ ಟ್ರೇಡ್ ಲೈಸನ್ಸ ಕೊಡುವ ಪಾಲಿಕೆಯ ಆರೋಗ್ಯ ಇಲಾಖೆ ಮತ್ತು ಅನಧಿಕೃತ ಕಟ್ಟಡ ಪತ್ತೇ ಹಚ್ಚುವ ನಗರ ಯೋಜನೆ (DDTP) ಅವರಂತೂ ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲಾ..

ಪಾಲಿಕೆಯ ನಗರ ಯೋಜನೆ ಮತ್ತು ಟ್ರೇಡ್ ಲೈಸನ್ಸ್ ಮತ್ತು ಅವರು ಆ ಅನಧಿಕೃತ ಕಟ್ಟಡದಲ್ಲಿ ಸೈಲೆಂಟ್ ಆಗಿರುವ ಹಿಂದಿನ ಮರ್ಮವಾದರೂ ಏನು ಅಂತೀರಾ…ಮುಂದಿನ ಸಂಚಿಕೆಯ ಉದಯ ವಾರ್ತೆಯಲ್ಲಿ ವೀಕ್ಷಿಸಿ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author