ನ್ಯೂ ಇಯರ್ ಗೆ ಹೆಂಡತಿಗೆ ಕೊಲೆ ಗಿಪ್ಟ್ ಕೊಟ್ಟ ಪತಿ.. ಆರೋಪಿ ಮೆಹಬೂಬ ಆರೆಸ್ಟ್…
ಹುಬ್ಬಳ್ಳಿ:- ಹೊಸ ವರ್ಷದ ದಿನದಂದೇ ಹೆಂಡತಿಯನ್ನು ಹೊಡೆದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯ ನ್ಯೂ ಆನಂದ ನಗರದಲ್ಲಿ ನಡೆದಿದೆ.
ಅಂಜುಮ್ (32) ಕೊಲೆಯಾದ ಮಹಿಳೆ.ಪತಿ ಮೆಹಬೂಬ ಇಂದು ಬೆಳೆಗ್ಗೆ ಮನೆಯ ಬೆಡ್ ರೂಮನಲ್ಲಿ ಪತ್ನಿಯನ್ನು ಕ್ಷುಲ್ಲಕ ಕಾರಣಕ್ಕೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.ಕೊಲೆಯಾದ ಮಹಿಳೆ ಮೆಹಬೂಬನಿಗೆ ಎರಡನೇ ಪತ್ನಿ ಎನ್ನಲಾಗಿದೆ.
ಸ್ಥಳಕ್ಕೆ ಹಳೇಹುಬ್ಬಳ್ಳಿ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಮೆಹಬೂಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.