ತಿಂಗಳಿಗೊಮ್ಮೆ ಲೆಕ್ಕ ನೋಡೋ ಪೋಲೀಸರು… ಹಿಂದೂ ನೋಡಂಗಿಲ್ಲಾ..ಮುಂದೂ ನೋಡಂಗಿಲ್ಲಾ..ಲೆಕ್ಕಾ ಮಾತ್ರ ಪಕ್ಕಾ ಬೇಕು…

Share to all

ತಿಂಗಳಿಗೊಮ್ಮೆ ಲೆಕ್ಕ ನೋಡೋ ಪೋಲೀಸರು… ಹಿಂದೂ ನೋಡಂಗಿಲ್ಲಾ..ಮುಂದೂ ನೋಡಂಗಿಲ್ಲಾ..ಲೆಕ್ಕಾ ಮಾತ್ರ ಪಕ್ಕಾ ಬೇಕು…

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡಕ್ಕೆ ಎರಡು ವರ್ಷಕ್ಕೊಮ್ಮೆ ಬರೋ ಪೋಲೀಸ ಅಧಿಕಾರಿಗಳು ಬಂದ ಕೂಡಲೇ ಇಲ್ಲಿ ಬಾರ್ ಎಷ್ಡು.?ರೆಸ್ಟೋರೆಂಟ್ ಎಷ್ಟು..? ಮರಳು ಲಾರಿ ಎಷ್ಟು..? ಅದು ಎಷ್ಟು… ಇದು ಎಷ್ಟು ಅಂತಾ ಲೆಕ್ಕ ಕೇಳೋ ಅಧಿಕಾರಿಗಳು ಅವು ಅಕ್ರಮನೋ.. ಸಕ್ರಮನೋ ಏನೂ ನೋಡಂಗೇ ಇಲ್ಲಾ..ಲೆಕ್ಕ ಮಾತ್ರ ಪಕ್ಕಾ ಬೇಕು…

ಅದಕ್ಕೆ ತಾಜಾ ಉದಾಹರಣೆ ಅಂದರೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ತಾರಾ ಎಮರಾಲ್ಡ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಅದು ಬಿಲ್ಡಿಂಗ್ ನ ನಾಲ್ಕನೇ ಮಹಡಿಯಲ್ಲಿದೆ..ಆದರೆ ಅದಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಫರ್ಮಿಷನ್ನೇ ಕೊಟ್ಟಿಲ್ಲಾ..ಹಾಗಂತಾ ಅವರೇ ಒಂದಲ್ಲಾ ಎರಡು ನೋಟೀಸ್ ಕೊಟ್ಟಿದ್ದಾರೆ.

ಇಂತಹ ಅಕ್ರಮ ಕಟ್ಡಡದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೀತಾ ಇದ್ದರೂ ಇಲ್ಲಿಯ ಪೋಲೀಸ ಇಲಾಖೆ ಮಾತ್ರ ಲೆಕ್ಕಕ್ಕೆ ಮಾತ್ರ ಸೀಮಿತವಾಗಿದೆ ಅನ್ನೋದು ಪಕ್ಕಾ ಆಗಿ ಹೋಗಿದೆ.ಗೊತ್ತಿದ್ದೂ ಅಧಿಕಾರಿಗಳು ಸುಮ್ನೇ ಕೂಡ್ರೋದು ಅಂದರೆ ಏನರ್ಥ ಅನ್ನೋದು ತಿಳಿತಾ ಇಲ್ಲಾ…

ಗೋಕುಲ ರಸ್ತೆಯ ಪೋಲೀಸರು ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಇದರಿಂದ ನಿಮಗೇನೂ ಇಲ್ಲಾ ಅಂದರೆ ಯಾಕೆ ಆ ಕಟ್ಟಡದಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಖಾಲಿ ಮಾಡಿಸತಾ ಇಲ್ಲಾ…

ಪೋಲೀಸರಿಗೆ ಕಣ್ಣಿಲ್ಲಾ…ಪಾಲಿಕೆಯ ಅಧಿಕಾರಿಗಳಿಗೆ ಕಿವಿ ಇಲ್ಲಾ..ಅವರ ಕಣ್ಣು ಕಿವಿ ಮಾತ್ರ ಇರೋದೇ ಬೇರೆ ಕಡೆ ಅನ್ನೋದು ಗ್ಯಾರಂಟಿ ಆದಂಗಾಗಿದೆ.ನಿಮಗೇನಾದರೂ ಸರಕಾರ ಕೊಡೋ ಸಂಬಳದ ಋಣ ಅನ್ನೋದು ಇದ್ದರೆ ಈಗಲಾದರೂ ಈ ಬಿಲ್ಡಿಂಗ್ ಗೆ ಒಂದ ಸಲ ವಿಸಿಟ್ ಮಾಡಿ ನೋಡೋಣ..

ನಾವು ಹೇಳತಾ ಇರೋದು ಇದು ಒಂದು ಸ್ಯಾಂಪಲ್ ಮಾತ್ರ ಇನ್ನೂ ಸಾಕಷ್ಟು ಅಕ್ರಮ ದಂಧೆಗಳು ಸಾಕಷ್ಟು ಇವೆ..ಒಂದೊಂದಾಗಿ ಉದಯ ವಾರ್ತೆ ಬಿಚ್ಚಿಡಲಿದೆ…

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author