ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್ಐ.. ಠಾಣೆಯಲ್ಲೇ ಕಣ್ಣೀರಿಟ್ಟ ಹ್ಯಾಂಡ್ಸಂ ಆಪೀಸರ್…

Share to all

ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್ಐ.. ಠಾಣೆಯಲ್ಲೇ ಕಣ್ಣೀರಿಟ್ಟ ಹ್ಯಾಂಡ್ಸಂ ಆಪೀಸರ್…

ಲಂಚ ಕೇಳುವಾಗ ಪಿಎಸ್ ಐ ಅನ್ನೋ ಖದರ್ ತೋರಿಸೋ ಪೋಲೀಸರು,ಲೋಕಾ ಬಲೆಗೆ ಬಿದ್ದಾಗೂ ಅದೇ ಖದರ್ ಇರಬೇಕಲ್ವಾ..ಲೋಕಾ ಬಲೆಗೆ ಬೀಳುತ್ತಿದ್ದಂತೆ ಹ್ಯಾಂಡ್ಸಂ ಪಿಎಸ್ಐ ಠಾಣೆಯಲ್ಲೇ ಕಣ್ಣೀರಿಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಕೆರೂರ ಪೋಲೀಸ ಠಾಣೆಯಲ್ಲಿ ನಡೆದಿದೆ.

https://youtu.be/sZAMnivje0Q?si=tXd0XfIATaN37i9v

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯ ಪಿಎಸ್‌ಐ ಭೀಮಪ್ಪ ರಬಕರ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಪಿಎಸ್‌ಐಯನ್ನು ಬಲೆಗೆ ಹಾಕಿದ್ದಾರೆ.

ಮಾಹಿತಿಯ ಪ್ರಕಾರ, ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಹಣದ ಬೇಡಿಕೆ ಇಟ್ಟಿದ್ದ ಪಿಎಸ್‌ಐ ಭೀಮಪ್ಪ ರಬಕರ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ಸಿಕ್ಕಿಬಿದ್ದಿದ್ದಾರೆ. ಕಾರ್ಯಾಚರಣೆಯನ್ನು ಗುಪ್ತವಾಗಿ ರೂಪಿಸಿದ ಲೋಕಾಯುಕ್ತ ಅಧಿಕಾರಿಗಳು ಸೂಕ್ತ ಸಾಕ್ಷಿಗಳೊಂದಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಈ ಘಟನೆ ಸ್ಥಳೀಯ ಪೊಲೀಸ್ ವಲಯದಲ್ಲಿ ಸಂಚಲನ ಮೂಡಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಉದಯ ವಾರ್ತೆ
ಬಾಗಲಕೋಟೆ


Share to all

You May Also Like

More From Author