ಮೋಸ್ಟ ಪಾಪೂಲರ್ ಪಾರ್ಚೂನರ ಕಾರಿನಲ್ಲಿ ಬೀದಿ ಬಸವಣ್ಣನ ಕಿಡ್ನ್ಯಾಪ್..ಶಿವಮೊಗ್ಗ ಗ್ಯಾಂಗ್ ಹುಬ್ಬಳ್ಳಿಗೆ ತಂದ ಪೋಲೀಸರು…
ಹುಬ್ಬಳ್ಳಿ:- ರೋಡನಲ್ಲಿ ಪಾರ್ಚೂನರ ಕಾರು ನೋಡಿದರೆ ಸಾಕು ಜನ ಹುಬ್ಬೇರಿಸುತ್ತಾರೆ.ಅಬ್ಬಾ ಪಾರ್ಚೂನರ ಕಾರು ಅಂತಾ..ಆ ಕಾರಿನ ಬೆಲೆ ಆರಂಭವಾಗುವುದೇ ನಲವತ್ತು ಲಕ್ಷದಿಂದ ಅಂತಹ ದುಬಾರಿ ಬೆಲೆಯ ಕಾರಿನಲ್ಲಿ ಸಂಚರಿಸುವ ಜನ ಅಂದರೆ ಶ್ರೀಮಂತರೇ.
ಆದರೆ ನಾವು ಹೇಳಲು ಹೊರಟಿರುವ ಸ್ಟೋರಿ ಕೇಳಿದರೆ ಅಬ್ಬಾ ಅಂತೀರಾ..ಹೌದು ಶಿವಮೊಗ್ಗದ ಕಳ್ಳರ ಗ್ಯಾಂಗೊಂದು ಶಿವಮೊಗ್ಗದಿಂದ ಹುಬ್ಬಳ್ಳಿಗೆ ಪಾರ್ಚೂನರ ಕಾರಿನಲ್ಲಿ ಬಂದು ತಡ ರಾತ್ರಿ ಬೀದಿಗಳಲ್ಲಿ ಮಲಗಿದ ದನಗಳನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದರು.
ಅಂತಹ ಗ್ಯಾಂಗನ್ನು ಬೆನ್ನತ್ತಿದ ಹುಬ್ಬಳ್ಳಿ ಬೆಂಡಿಗೇರಿ ಪೋಲೀಸರು ಶಿವಮೊಗ್ಗದಿಂದ ಕಳ್ಳತನಕ್ಕೆ ಬಳಸಿದ ಪಾರ್ಚೂನರ್ ಕಾರು ಹಾಗೂ ದನಗಳ ಕಳ್ಳ “ಮುಬಾರಕ” ಎಂಬಾತನನ್ನು ಆರೆಸ್ಟ್ ಮಾಡಿದ್ದಾರೆ..ಆ ಪಾರ್ಚೂನರ ಗ್ಯಾಂಗನಲ್ಲಿ ಇನ್ನೂ ಹಲವರಿದ್ದು ಅವರ ಪತ್ತೆಗಾಗಿ ಪೋಲೀಸರು ಬಲೆ ಬೀಸಿದ್ದಾರೆ.