ಧಾರವಾಡ ಪೈರಿಂಗ್ ಪ್ರಕರಣ..ಕೊನೆಗೂ ಆರೆಸ್ಟ್ ಆದ ಪ್ರಮುಖ ಆರೋಪಿ ಸುಂದರಪೌಲ್…
ಧಾರವಾಡ:- ಮೇ 26 ರಂದು ಧಾರವಾಡದ ತಡಸಿನಕೊಪ್ಪದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಪೈರಿಂಗ್ ಪ್ರಕರಣದ ಪ್ರಮುಖ ಆರೋಪಿ ಸುಂದರ ಪೌಲನನ್ನು ಧಾರವಾಡ ಪೋಲೀಸರು ತಮಿಳುನಾಡಿನಲ್ಲಿ ಆರೆಸ್ಟ್ ಮಾಡಿದ್ದಾರೆ.
ಘಟನೆ ನಡೆದ 24 ಘಂಟೆಯೊಳಗೆ ಧಾರವಾಡದ ವಿದ್ಯಾಗಿರಿ ಪೋಲೀಸರು ಫಿಲೋಮಿನ್..ಪ್ರವೀಣ ಸುತಾರ್..ಬೆಂಜಮಿನ್..ವಿಶಾಲ್ ಹಾಗೂ ಇಂದ್ರಪಾಲ ಎಂಬುವರನ್ನು ಬಂಧಿಸಿದ್ದರು.ಪ್ರಮುಖ ಆರೋಪಿ ಸುಂದರಪೌಲ್ ತಲೆಮರೆಸಿಕೊಂಡಿದ್ದ.
ಪ್ರಮುಖ ಆರೋಪಿಯ ಬಂಧನಕ್ಕೆ ಹಲವು ಟೀಂಗಳನ್ನು ಕಮೀಷನರ್ ಎನ್ ಶಶಿಕುಮಾರ ರಚನೆ ಮಾಡಿದ್ದರು.ಈಗ ಆರೋಪಿಯನ್ನು ತಮಿಳುನಾಡಿನ ಧಾರವಾಡ ವಿದ್ಯಾಗಿರಿ ಪೋಲೀಸರು ಬಂಧಿಸಿದ್ದಾರೆ..!