ದುಡ್ಡಿಗಾಗಿ ಪೋಲೀಸರ ದಂಗಲ್..ಕೇಸೂ ಸೈ..ದುಡ್ಡೂ ಸೈ…

Share to all

ದುಡ್ಡಿಗಾಗಿ ಪೋಲೀಸರ ದಂಗಲ್..ಕೇಸೂ ಸೈ..ದುಡ್ಡೂ ಸೈ…

ಹುಬ್ಬಳ್ಳಿ:- ಒಂದೊಂದು ಪೋಲೀಸ ಠಾಣೆಯಲ್ಲಿ ಒಂದೊಂದು ರೀತಿ ದುಡ್ಡಿಗಾಗಿ ದಂಗಲ್ ಆರಂಭವಾಗಿದೆ..ಹೆಂಗಾದರೂ ಮಾಡಿ ದುಡ್ಡು ಮಾಡಬೇಕು ಎಂಬ ಹಠಕ್ಕೆ ಬಿದ್ದಂತಿದೆ ಪೋಲೀಸರ ಕಥೆ..

ಕಳೆದ ಒಂದು ವಾರದ ಹಿಂದೆ ಕೇಸೊಂದರಲ್ಲಿ ಒಂದು ಲಕ್ಷ ಕೇಳಿ ಮೂವತ್ತು ಸಾವಿರಕ್ಕೆ “ತಿಲಕ”ವಿಟ್ಟ ಆ ಮಹಾಶಯನ ಸ್ಟೋರಿ ಕೇಳಿದರೆ ಏನ್ರೀ ಇವರು ಸುಳ್ಳ ಸುಳ್ಳ ರೊಕ್ಕಕ್ಕೋಸ್ಕರ ಹಿಂಗಾ ಮಾಡೋದು ಅನ್ನೋದಂತೂ ಸತ್ಯ..

ಮತ್ತೊಂದು ಠಾಣೆಯ ಹೊಟೆಲ್ಲೊಂದರಲ್ಲಿ ನಡೆದ ದಂಗಲ್ ನಲ್ಲಿ ಪೋಲೀಸರೇ ದರೋಡೆ ಮಾಡಿದ ನೈಜ ಘಟನೆ ಸಕಲ ಸಂಪನ್ನ ಇನಸ್ಪೆಕ್ಟರ್ ಗೆ ಗೊತ್ತಾದರೂ ಪಾಪ ಏನೂ ತುಟಿಕ್ ಪಿಟಕ್ ಎನ್ನದೇ ತಾನಾಯ್ತು ತನ್ನ ಕೆಲಸವಾಯ್ತು ಅಂತಾ ಗಪ್ ಆಗಿಬಿಟ್ಟಿದ್ದಾರೆ…

ಇನ್ನೂ ಡ್ರೈ ಏರಿಯಾದಲ್ಲಿ ಬ್ಯಾಟರಿ ಹಾಕ್ಕೊಂಡು ಕುಳಿತಿರುವ ದಂಡನಾಯಕನ ಕಥೆ ಅಂತೂ ಕೇಳಂಗೇ ಇಲ್ಲಾ..ಕಳೆದ ಹದಿನೈದು ದಿನಗಳ ಹಿಂದೆ ಒಬ್ಬ ಮಹಿಳೆ ತನಗೆ ಆದ ಅನ್ಯಾಯದಲ್ಲಿ ಲಕ್ಷ ಲಕ್ಷ ಹೊಡೆದಿದ್ದಾರೆ ಅಂತಾ ರಸ್ತೆಯಲ್ಲೇ ನಿಂತೂ ಛೀ ಮಾರಿ ಹಾಕಿದರೂ ಅವರಿಗೆ ಅದೂ ಇಲ್ಲವೇ ಇಲ್ಲಾ… ಒಬ್ಬೋಬ್ಬರ ಕಥೆಯನ್ನೂ ಉದಯ ವಾರ್ತೆ ಬಿಚ್ಚಿಡಲಿದೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author