ಐಪಿಎಸ್ ಅಧಿಕಾರಿಗಳ ವರ್ಗಾವಣೆ ಎಡವಟ್ಟು..ಭೂಷಣ ಬೋರಸೆ ಹುಬ್ಬಳ್ಳಿಗೆ ಬರೋದು ಡೌಟ್…

Share to all

ಐಪಿಎಸ್ ಅಧಿಕಾರಿಗಳ ವರ್ಗಾವಣೆ ಎಡವಟ್ಟು..ಭೂಷಣ ಬೋರಸೆ ಹುಬ್ಬಳ್ಳಿಗೆ ಬರೋದು ಡೌಟ್…

ಹುಬ್ಬಳ್ಳಿ:-ಕಳೆದ ಶನಿವಾರ ಬೆಳಗಾವಿಯಿಂದ ಹುಬ್ಬಳ್ಳಿ ಕಮೀಷನರ್ ಸ್ಥಾನಕ್ಕೆ ವರ್ಗಾವಣೆಯಾಗಿದ್ದ ಐಪಿಎಸ್ ಭೂಷಣ ಭೋರಸೆ ಬೆಳಗಾವಿಯಿಂದ ಹುಬ್ಬಳ್ಳಿಗೆ ಬರೋದು ಡೌಟ್ ಎನ್ನಲಾಗುತ್ತಿದೆ..ಅದಕ್ಕೆ ಹಲವಾರು ಉಹಾಪೋಹಗಳು ಕೇಳಿಬರಲಾರಂಭಿಸಿವೆ..

ರಾಜ್ಯ ಸರಕಾರ ಹಿರಿಯ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸಿ ಎರಡು ದಿನ ಕಳೆದರೂ ನಿಯೋಜಿಸಿದ ಸ್ಥಳಗಳಲ್ಲಿ ಅಧಿಕಾರ ಸ್ವೀಕರಿಸಿಲ್ಲಾ..ಅದಕ್ಕೆ ಸ್ಥಳೀಯ ಶಾಸಕರು ಹಾಗೂ ಸಚಿವರ ಒತ್ತಡ ಎನ್ನಲಾಗುತ್ತಿದೆ.

ಇದರಲ್ಲಿ ಪ್ರಮುಖವಾಗಿ ಗಮನ ಸೆಳೆದಿರುವ ಹುಬ್ಬಳ್ಳಿ-ಧಾರವಡ ಪೋಲೀಸ ಕಮೀಷನರ್ ಹುದ್ದೆಯ ಬದಲಾವಣೆ..ಸದ್ಯ ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಆಗಿರುವ ಎನ್.ಶಶಿಕುಮಾರ ಜಾಗಕ್ಕೆ ಬೆಳಗಾವಿ ಕಮೀಷನರ್ ಭೂಷಣ ಬೋರಸೆ ಅವರನ್ನು ನೇಮಕ ಮಾಡಿ ಆದೇಸಿಸಲಾಗಿದೆ.

ಆದರೆ ಪ್ರಸ್ತುತ ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಆಗಿರೋ ಎನ್.ಶಶಿಕುಮಾರ ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲಾ..ಆದರೆ ಬಲ್ಲ ಮೂಲಗಳ ಪ್ರಕಾರ ಇನ್ನೆರಡು ದಿನದಲ್ಲಿ ಎನ್.ಶಶಿಕುಮಾರ್ ಡಾವಣಗೇರಿಗೆ ವರ್ಗಾವಣೆಯಾಗಲಿದ್ದಾರೆ ಎನ್ನಲಾಗಿದೆ.

ಆದರೆ ಹುಬ್ಬಳ್ಳಿ-ಧಾರವಾಡ ಕಮೀಷನರ್ ಸ್ಥಾನಕ್ಕೆ‌ ಭೂಷಣ ಬೋಷರೆ ಬರೋದು ಡೌಟ್ ಎಂದಾಗ ಮತ್ತೆ ಮೂವರು ಹೆಸರು ಮುಂಚೂಣಿಗೆ ಬರತಾ ಇವೆ..ಏನೇ ಆಗಲಿ ಹುಬ್ಬಳ್ಳಿ-ಧಾರವಾಡಕ್ಕೆ ಖಡಕ್ ಕಮೀಷನರ್ ಬರಲಿ ಎಂಬುದು ಎಲ್ಲರ ಆಸೆ..

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author