ಕಮೀಷನರ್ ಸೈಲೆಂಟ್ ಡೈರೆಕ್ಸನ್… ಮೈ ಕೊಡವಿದ ಸಿಸಿಬಿ ಪೋಲೀಸರು..ಭರ್ಜರಿ ಕಾರ್ಯಾಚರಣೆ..ನಾಲ್ವರ ಬಂಧನ..ಆರು ಕೆಜಿಗೂ ಹೆಚ್ಚು ಗಾಂಜಾ ವಶ..

Share to all

ಕಮೀಷನರ್ ಸೈಲೆಂಟ್ ಡೈರೆಕ್ಸನ್… ಮೈ ಕೊಡವಿದ ಸಿಸಿಬಿ ಪೋಲೀಸರು..ಭರ್ಜರಿ ಕಾರ್ಯಾಚರಣೆ..ನಾಲ್ವರ ಬಂಧನ..ಆರು ಕೆಜಿಗೂ ಹೆಚ್ಚು ಗಾಂಜಾ ವಶ..

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಭೂಷಣ ಬೋರ್ಸೆ ಅವರ ಸೈಲೆಂಟ್ ಡೈರೆಕ್ಸನ್ ಗೆ ಹುಬ್ಬಳ್ಳಿ ಪೋಲೀಸರು ಮೈ ಕೊಡವಿದ್ದಾರೆ..ಆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಎಸಿಪಿ ಶಿವಪ್ರಕಾಶ ನಾಯಕ ಅವರ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಆರು ಕೆಜಿಗೂ ಹೆಚ್ಚು ಗಾಂಜಾ ವಶಪಡಿಸಿಕೊಂಡು ನಾಲ್ವರನ್ನ ಬಂಧಿಸಿದ್ದಾರೆ..

ಹುಬ್ಬಳ್ಳಿಯ ರೈಲು ನಿಲ್ದಾಣದ ಬಳಿ ಗಾಂಜಾ ಮಾರಾಟದ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಸಿಸಿಬಿ ಪೋಲೀಸರು ಹುಬ್ಬಳ್ಳಿಯ ಮಾಂತೇಶ ಹೊಸಮನಿ.ಫಯಾಜ್..ಸೋಹೆಬ್ ಧಾರವಾಡ ಹಾಗೂ ಬೆಂಗಳೂರಿನ ಅಲೀನಾ ಅವರನ್ನು ಆರೆಸ್ಟ್ ಮಾಡಿದ್ದಾರೆ.

ಬಂಧಿತರಿಂದ ಆರು ಕೆಜಿ ಗಾಂಜಾ..ಡಿಜಿಟಲ್ ತೂಕದ ಯಂತ್ರ..ನಾಲ್ಕು ಮೋಬೈಲ್ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author