ಹುಬ್ಬಳ್ಳಿ-ಧಾರವಾಡದಲ್ಲಿಆ್ಯಂಟಿ ಸ್ಟಾಬಿಂಗ್ ಸ್ಕ್ವಾಡ್‌೯..ಹುಬ್ಬಳ್ಳಿ‌ ಮೂಲೆ‌ ಮೂಲೆಯಲ್ಲಿ ವಾಹನಗಳ ತಪಾಸಣೆ..

Share to all

ಹುಬ್ಬಳ್ಳಿ-ಧಾರವಾಡದಲ್ಲಿಆ್ಯಂಟಿ ಸ್ಟಾಬಿಂಗ್ ಸ್ಕ್ವಾಡ್‌೯..ಹುಬ್ಬಳ್ಳಿ‌ ಮೂಲೆ‌ ಮೂಲೆಯಲ್ಲಿ ವಾಹನಗಳ ತಪಾಸಣೆ..

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡಕ್ಕೆ ಅಂತಾ ಪೋಲೀಸ ಕಮೀಷನರ್ ಆಗಿ ಅಧಿಕಾರವಹಿಸಿಕೊಂಡ ಐಪಿಎಸ್ ಅಧಿಕಾರಿ ಭೂಷಣ ಬೋರ್ಸೆ ಹುಬ್ಬಳ್ಳಿ-ಧಾರವಾಡದ ಎಲ್ಲಾ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಆ್ಯಂಟಿ ಸ್ಟಾಬಿಂಗ್ ಸ್ಕ್ವಾಡ್ ರಚನೆ ಮಾಡಿದ್ದಾರೆ.

ಆ್ಯಂಟಿ ಸ್ಟಾಬಿಂಗ್ ಸ್ಕ್ವಾಡ್ ರಚನೆ ಮಾಡಿದ ಒಂದೇ ದಿನದಲ್ಲಿ ನಗರಗಳ ಪೋಲೀಸರು ಮೂಲೆ ಮೂಲೆಯಲ್ಲಿ ನಿಂತು ಎರಡನೂರಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ನಡೆಸಿದ್ದಾರೆ.ಇನ್ಮುಂದೆ ವಾಹನಗಳಲ್ಲಿ ಮಾರಕಾಸ್ತ್ರ ಸೇರಿದಂತೆ ಯಾವುದೇ ನಿಷೇಧಿತ ವಸ್ತುಗಳು ಸಿಕ್ಕರೆ ಜೈಲು ಗ್ಯಾರಂಟಿ ಎನ್ನಲಾಗಿದೆ.

ಕಳೆದ ಮೂರು ದಿನಗಳಿಂದ ಗಾಂಜಾ,ರೌಡೀಸಂ,ಮಾರಕಾಸ್ತ್ರ ಹಾಗೂ ಟ್ರಾಪಿಕ್ ಕ್ಲೀಯರೆನ್ಸ್ ಹಿಂದೆ ಬಿದ್ದಿರುವ ಕಮೀಷನರ್ ಭೂಷಣ ಬೋರ್ಸೆ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಠಾಣೆಯಲ್ಲಿ ಕೂರದೇ ಕೆಲಸ ಮಾಡಿ ಎಂದು ಎಚ್ಚರಿಕೆ ನೀಡಿದ್ದಾರೆ..

ಈ ಹಿನ್ನೆಲೆಯಲ್ಲಿ ನಿನ್ನೆ ಸಾಯಂಕಾಲ ಹುಬ್ಬಳ್ಳಿಯ ಶಿರೂರ ಪಾರ್ಕನಲ್ಲಿ ಪಿಎಸ್ಐಗಳಾದ ಪುನೀತಕುಮಾರ ಹಾಗೂ ಸುನೀಲ ತಮ್ಮ ತಂಡದೊಂದಿಗೆ ವಾಹನಗಳ ತಪಾಸಣೆ ನಡೆಸಿದರು…

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author