ಕೈ ಮುಗೀತೇವೆ..ಕುಡ್ಯಾಕಾದರೂ ನೀರು ಕೊಡಿ..ತಹಶೀಲ್ದಾರಗೆ ಘೇರಾವು….
ಹುಬ್ಬಳ್ಳಿ:-ಮಳೆ ಇಲ್ಲಾ..ಬೆಳೆ ಇಲ್ಲಾ..ಕುಡ್ಯಾಕಂತೂ ನೀರು ಇಲ್ಲವೇ ಇಲ್ಲಾ..ಹಿಂಗಾದರ ನಾವು ಬದುಕೋದು ಹೆಂಗ್ರೀ ಅಂತಾ ಕುಂದಗೋಳ ತಾಲೂಕಿನ ಶಿರೂರ ಗ್ರಾಮದ ಜನರು ತಹಸೀಲ್ದಾರ ರಾಜು ಮಾವರಕರ ಅವರ ಗಾಡಿ ತಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿದೆ.
ಶಿರೂರ ಗ್ರಾಮದ ನವಗ್ರಾಮದಲ್ಲಿ ಕಳೆದ ಹಲವು ತಿಂಗಳುಗಳಿಂದ ಕುಡ್ಯಾಕ ನೀರಿಲ್ಲಾ..ಕನಿಷ್ಠ ವಾರಕ್ಕೊಮ್ಮೆ ಆದರೂ ಕುಡ್ಯಾಕ ನೀರು ಕೊಡಿ ಎಂದು ತಹಶೀಲ್ದಾರ ಸಾಹೇಬ್ರಿಗೆ ಘೇರಾವು ಹಾಕಿ ತಮ್ಮ ಅಳಿಲು ತೋಡಿಕೊಂಡರು..
ತಕ್ಷಣ ಗ್ರಾಮ ಪಂಚಾಯತಿ.ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತ ಅಧಿಕಾರಿಗಳನ್ನು ಕರೆಯಿಸಿ ನೀರಿನ ವ್ಯವಸ್ಥೆ ಕಲ್ಪಿಸಿ ಎಂದು ಸೂಚನೆ ನೀಡಿದರು.