ಹು.ಧಾ.ಮಹಾನಗರ ಜಿಲ್ಲಾಧ್ಯಕ್ಷರಾಗಿ ಡಂಗನವರ, ಗ್ರಾಮೀಣ ಜಿಲ್ಲಾಧ್ಯಕ್ಷರಾಗಿ ಜುಟ್ಟಲ್ ಅಧಿಕಾರ ಸ್ವೀಕಾರ*

Share to all

*ಹು.ಧಾ.ಮಹಾನಗರ ಜಿಲ್ಲಾಧ್ಯಕ್ಷರಾಗಿ ಡಂಗನವರ, ಗ್ರಾಮೀಣ ಜಿಲ್ಲಾಧ್ಯಕ್ಷರಾಗಿ ಜುಟ್ಟಲ್ ಅಧಿಕಾರ ಸ್ವೀಕಾರ*

ಇಂದು ಭಾನುವಾರ ಸಪ್ಟೆಂಬರ್ 20 ರಂದು ಬೆಳಿಗ್ಗೆ 10-00 ಗಂಟೆಗೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ನೂತನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಅಲ್ತಾಫಹುಸೇನ ಹಳ್ಳೂರ ಅವರಿಂದ ಹು.ಧಾ. ಮಹಾನಗರ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಸದಾನಂದ ವಿ. ಡಂಗನವರ ಅವರು ಅಧಿಕಾರವನ್ನು ಸ್ವೀಕರಿಸಿದರು, ಅದೇ ರೀತಿಯಲ್ಲಿ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಅನಿಲಕುಮಾರ್ ಪಾಟೀಲ್ ಅವರಿಂದ ಗ್ರಾಮೀಣ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಜುಟ್ಟಲ್ ಅವರು ಅಧಿಕಾರ ಸ್ವೀಕರಿಸಿದರು,

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ ಕಳೆದ ಒಂಬತ್ತು ವರ್ಷಗಳಿಂದ ಅಲ್ತಾಫ್ ಹಳ್ಳೂರ ಹಾಗೂ ಎಂಟು ವರ್ಷಗಳಿಂದ ಅನಿಲ್ ಪಾಟೀಲ್ ಅವರ ಕಾರ್ಯವೈಖರಿ ಕೊಂಡಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಬೂತ್ ಮಟ್ಟದಿಂದ ಪರಿಣಾಮಕಾರಿ ಸಂಘಟನೆ ಹಾಗೂ ಸಮಯ ಪಾಲನೆಯ ಕುರಿತು ಕಾರ್ಯಕರ್ತರಿಗೆ ಶಿಸ್ತಿನ ಪಾಠ ಮಾಡಿದರು, ನೂತನವಾಗಿ ನೇಮಕಗೊಂಡ ಉಭಯ ಜಿಲ್ಲಾಧ್ಯಕ್ಷ ಸದಾನಂದ ಡಂಗನವರ ಹಾಗೂ ಚಂದ್ರಶೇಖರ ಜುಟ್ಟಲ್ ಅವರಿಗೆ ಶುಭ ಕೋರಿದರು,

ವಿಧಾನ ಪರಿಷತ್ ಸದಸ್ಯರಾದ ಎಫ್.ಎಚ್.ಜಕ್ಕಪ್ಪನವರ, ಎನ್.ಎಚ್.ಕೋನರಡ್ಡಿ, ಎ.ಎಂ.ಹಿಂಡಸಗೇರಿ, ಶ್ರೀಮತಿ ಶಿವಲೀಲಾ ಕುಲಕರ್ಣಿ, ದೀಪಕ ಚಿಂಚೊರೆ, ಐ.ಜಿ.ಸನದಿ, ಮೋಹನ ಲಿಂಬಿಕಾಯಿ,ಸತೀಶ ಮಹೆರವಾಡೆ, ರಾಬರ್ಟ್ ದದ್ದಾಪೂರಿ, ಪ್ರಪುಲ್ಲಚಂದ್ರ ರಾಯನಗೌಡರ್, ನಾಗರಾಜ್ ಗೌರಿ, ರಾಜಶೇಖರ ಮೆಣಸಿನಕಾಯಿ, ರಜತ್ ಉಳ್ಳಾಗಡ್ಡಿಮಠ, ಅಲ್ತಾಫ್ ಕಿತ್ತೂರ,
ತಾರಾದೇವಿ ವಾಲಿ, ಮನೋರಮಾ ಬುನಿಯನ್, ಬಂಗಾರೇಶ ಹಿರೇಮಠ, ನವೀದ್ ಮುಲ್ಲಾ, ಹನಮಂತ ಕೊರವರ, ಮಹಮೂದ್ ಕೊಳೂರ,ಶರೀಫ ಗರಗದ, ಸಂಗಮೇಶ್ವರ ಗೌರಕ್ಕನವರ, ಇಲಿಯಾಸ ಮನಿಯಾರ, ಪ್ರಕಾಶ ಹಳಿಯಾಳ, ಬಸವರಾಜ್ ಬೆಣಕಲ್,ಅನಿಲ ಬುನಿಯನ್, ಆನಂದ ಮುರಗೋಡ, ಆನಂದ ಜಾಧವ, ನಾಗರಾಜ್ ಗುರಿಕಾರ, ಗೌರಮ್ಮ ಬಲೋಗಿ, ದೊಡ್ಡರಾಮಪ್ಪ ದೊಡ್ಡಮನಿ, ಮಹೆಬೂಬ್ ಪಾಷಾ, ಶಂಕ್ರಪ್ಪ ಹರಿಜನ, ಪ್ರಕಾಶ ಬುರಬುರೆ,ಸುನೀಲ್ ಮರಾಠಾ, ಇಕ್ಬಾಲ್ ನವಲೂರ, ಸುವರ್ಣ ಕಲ್ಲಕುಂಟ್ಲಾ, ಸರೋಜಾ ಹೂಗಾರ, ಅರ್ಜುನ ಪಾಟೀಲ್, ಬಶೀರ್ ಗುಡಮಾಲ್, ಸಾದಿಕ್ ಯಕ್ಕುಂಡಿ,ರಶೀದ ಭೊಲಾಭಾಯಿ, ಶಾರುಖ್ ಮುಲ್ಲಾ, ಮಂಜುನಾಥ ಭೂವಿ, ಇಕ್ಬಾಲ್ ಜಮಾದಾರ, ನಜೀರ ಮನಿಯಾರ, ಯುಸೂಫ ಸವಣೂರ, ಪ್ರೇಮನಾಥ ಚಿಕ್ಕತುಂಬಳ, ಡಾ. ಆನಂದ ಕುಮಾರ್, ಅಜರ್ ಮರ್ಚೆಂಟ್, ರಫೀಕ ಚವ್ಹಾಣ, ಯಾಸೀನ ಹಾವೇರಪೇಟ, ಬಸವರಾಜ ಕಿತ್ತೂರ,ಮಹೇಶ ದಾಬಡೆ,ಅಬ್ದುಲ್ ಗನಿ, ಸಲೀಂ ಸುಂಡಕೆ, ಮುಶ್ತಾಕ ಮುದಗಲ್ ಸೇರಿದಂತೆ ನೂರಾರು ಕಾಂಗ್ರೆಸ್ ಮುಖಂಡರು, ಕೆಪಿಸಿಸಿ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು, ಪಾಲಿಕೆ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಉದಯ ವಾರ್ತೆ

ಹುಬ್ಬಳ್ಳಿ


Share to all

You May Also Like

More From Author