ಕುಂದಗೋಳ ಅನ್ನಭಾಗ್ಯದಲ್ಲಿ ಅಕ್ರಮ ಗೋದಿ ಸಾಗಾಟ ಪ್ರಕರಣ..ಕೊನೆಗೂ ದೂರು ದಾಖಲು..ಮೂವರ ವಿರುದ್ಧ FIR..ಆರೆಸ್ಟ್ ಆಗತಾರಾ ಆರೋಪಿಗಳು..

Share to all

ಕುಂದಗೋಳ ಅನ್ನಭಾಗ್ಯದಲ್ಲಿ ಅಕ್ರಮ ಗೋದಿ ಸಾಗಾಟ ಪ್ರಕರಣ..ಕೊನೆಗೂ ದೂರು ದಾಖಲು..ಮೂವರ ವಿರುದ್ಧ FIR..ಆರೆಸ್ಟ್ ಆಗತಾರಾ ಆರೋಪಿಗಳು..

ಕುಂದಗೋಳ:- ಕಳೆದ ಮೂರು ದಿನಗಳ ಹಿಂದೆ ಅನ್ನಭಾಗ್ಯ ಮತ್ತು ಅಕ್ರಮವಾಗಿ ಗೋದಿ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರೇ ಅನ್ನಭಾಗ್ಯ ಅಕ್ಕಿ ಸಾಗಿಸುವ ಗಾಡಿಯನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ ಪ್ರಕರಣದಲ್ಲಿ ಕೊನೆಗೂ ಹಂಗೋ ಹಿಂಗ ಮಾಡಿ ಆಹಾರ ಇಲಾಖೆಯವರು ದೂರು ದಾಖಲಿಸಿದ್ದಾರೆ.

ಆಹಾರ ಇಲಾಖೆಯವರು ನೀಡಿದ ದೂರಿನ ಮೇಲೆ ಕುಂದಗೋಳ ಪೋಲೀಸ ಠಾಣೆಯಲ್ಲಿ ಗೋಡೌನ್ ಮ್ಯಾನೇಜರ್ ಸುಭಾಸ ಆಲದಕಟ್ಟಿ..ಶರೀಪ ಹಂಚಿನಾಳ ಹಾಗೂ ಪ್ರವಿಣ ಅವರ ಮೇಲೆ FIR ದಾಖಲಾಗಿದೆ.

ಅಕ್ರಮ ಗೋದಿ ಸಾಗಾಟದ ಪ್ರಕರಣ ಈಗ ಪೋಲೀಸರ ಅಂಗಳದಲ್ಲಿದ್ದು ಖಡಕ್ ಪೋಲೀಸ ಇನಸ್ಪೆಕ್ಟರ್ ಶಮೀರ್ ಸಾಹೇಬ್ರು ಈ ಪ್ರಕರಣವನ್ನು ಯಾವ ಹಂತಕ್ಕೆ ಒಯ್ತಾರೆ ಕಾದು ನೋಡ ಬೇಕಾಗಿದೆ..ಅವರನ್ನ ಆರೆಸ್ಟ್ ಮಾಡಿ ತನಖೆ ಮಾಡಿದರೆ ಅಕ್ರಮದ ಪಟಾಲಂನ ಬಣ್ಣ ಬಯಲಾಗಲಿದೆ ಅನ್ನೋದು ಉದಯ ವಾರ್ತೆ ಕಳಕಳಿ..

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author