ಹುಬ್ಬಳ್ಳಿಯಲ್ಲಿ ಉಸಿರು ನಿಲ್ಲಿಸಿದ ಉದ್ಯಮಿಯ ಮಗ..ಇರೋ ಒಬ್ಬ ಗಂಡು ಮಗ ನೇಣಿಗೆ ಶರಣು.

Share to all

ಹುಬ್ಬಳ್ಳಿಯಲ್ಲಿ ಉಸಿರು ನಿಲ್ಲಿಸಿದ ಉದ್ಯಮಿಯ ಮಗ..ಇರೋ ಒಬ್ಬ ಗಂಡು ಮಗ ನೇಣಿಗೆ ಶರಣು.

ಹುಬ್ಬಳ್ಳಿ:- ಹುಬ್ಬಳ್ಳಿಯ ದೊಡ್ಡ ಉದ್ಯಮಿಯೊಬ್ಬರ ಮಗ ಮನೆಯ ಬೆಡ್ ರೂಮಿನಲ್ಲಿ ಕಳೆದ ರಾತ್ರಿ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಪದ್ಮಾವತಿ ಹೌಸಿಂಗ್ ಕಾಲೋನಿಯಲ್ಲಿ ನಡೆದಿದೆ.

ಮೃತನನ್ನು ಚಂದ್ರು ದಂಡಗಿ ವಯಸ್ಸು 19 ಎಂದು ಗುರುತಿಸಲಾಗಿದೆ.ಮೃತನು ಮಾನಸಿಕವಾಗಿ ಅಸ್ತವ್ಯಸ್ತನಾಗಿದ್ದನು ಎನ್ನಲಾಗಿದ್ದು ಕಳೆದ ರಾತ್ರಿ ಊಟ ಮಾಡಿ‌ ಮಲಗಲು ಹೋದಾಗ ರಾತ್ರಿಯೇ ಸುಸೈಡ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಎಲ್ಲವೂ ಇದ್ದರೂ ಇರೋ ಒಬ್ಬನೇ ಒಬ್ಬ ಗಂಡು ಮಗ.. ದೊಡ್ಡವರ ಮಕ್ಕಳು ಹೀಗೆ ಹದಿಹರೆಯದಲ್ಲಿ ಉಸಿರು ನಿಲ್ಲಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.ಪ್ರಕರಣ ದಾಖಲಿಸಿಕೊಂಡಿರುವ ಗೋಕುಲ ರೋಡ್ ಪೋಲೀಸರು ತನಿಖೆ ಕೈಕೊಂಡಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author