ಹುಬ್ಬಳ್ಳಿಯಲ್ಲಿ ಬಹು ದೊಡ್ಡ ದರೋಡೆ..ಮೂರನೇ ಬಾರೀ ಜೈನ ಮಂದಿರ ದರೋಡೆ..50 ಲಕ್ಷದ ಚಿನ್ನಾಭರಣ ಕಳ್ಳತನ.
ಹುಬ್ಬಳ್ಳಿ:- ಹುಬ್ಬಳ್ಳಿಯ ಗಬ್ಬೂರ ಬಳಿ ಇರುವ ದಾದಾವಾಡಿ ಶ್ರೀ ಆದಿನಾಥ ಜೈನ ಮಂದಿರದಲ್ಲಿ ಮುಸುಕುದಾರಿಗಳಿಂದ ಬಹು ದೊಡ್ಡ ದರೋಡೆ ನಡೆದಿದೆ.ಈ ಜೈನ ಮಂದಿರ ಕಳ್ಳರಿಂದ ಟಾರ್ಗೇಟ್ ಆಗುತ್ತಿರುವುದು ಇದು ಮೂರನೇ ಬಾರಿ..
ಹೌದು ಹುಬ್ಬಳ್ಳಿಯ ಹೊರವಲಯದ ಜೈನ ಮಂದಿರದಲ್ಲಿ ಮೂವರು ಮುಸುಕುದಾರಿಗಳಿಂದ ಮಂದಿರದ ದ್ವಾರ ಮುರಿದು ದೇವರ ಮೇಲಿದ್ದ ಬಂಗಾರದ ಕಿರೀಟ..ಬೆಳ್ಳಿ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.
ಸುಮಾರು ಐವತ್ತು ಲಕ್ಷದ ಮೌಲ್ಯದ ವಸ್ತುಗಳು ಎಂದು ಅಂದಾಜಿಸಲಾಗಿದೆ.ಇದೇ ಜೈನ ಮಂದಿರದಲ್ಲಿ ಕಳೆದ ವರ್ಷ ಗುಜರಾತ್ ಮೂಲದ ಕಳ್ಳರಿಂದ ಕಳ್ಲತನ ನಡೆದಿತ್ತು.ಅವರನ್ನು ಪೋಲೀಸರು ಬಂಧಿಸುವ ಸಮಯದಲ್ಲಿ ಪೋಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಪೋಲೀಸರು ಕಾಲಿಗೆ ಗುಂಡು ಹೊಡೆದು ಜೈಲಿಗೆ ಅಟ್ಟಿದ್ದರು.
ಈ ಮಂದಿರ ಸತತ ಮೂರನೇ ಬಾರಿ ಕಳ್ಳತನವಾಗುತ್ತಿರುವುದು.ಹೀಗಿರುವಾಗ ಅಲ್ಲಿನ ಭದ್ರತೆಯ ಬಗ್ಗೆ ಚರ್ಚೆಯಾಗುತ್ತಿದೆ.ಒಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ತನಿಖೆಯನ್ನು ನಡೆಸಿದ್ದಾರೆ.