ಕಬ್ಬು ಬೆಳೆಗಾರರ ಹೋರಾಟಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಎಂಟ್ರಿ..ಹೈವೇ ಬಿಟ್ಟು ಹುಬ್ಬಳ್ಳಿಯತ್ತ ಮುಖ ಮಾಡಿದ ಪಾದಯಾತ್ರೆ…ಕೇಂದ್ರ ಸಚಿವರ ಮನೆಗೆ ಮುತ್ತಿಗೆ.

Share to all

ಕಬ್ಬು ಬೆಳೆಗಾರರ ಹೋರಾಟಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಎಂಟ್ರಿ..ಹೈವೇ ಬಿಟ್ಟು ಹುಬ್ಬಳ್ಳಿಯತ್ತ ಮುಖ ಮಾಡಿದ ಪಾದಯಾತ್ರೆ…ಕೇಂದ್ರ ಸಚಿವರ ಮನೆಗೆ ಮುತ್ತಿಗೆ.

ಹುಬ್ಬಳ್ಳಿ:- ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕಬ್ಬು ಬೆಳೆಗಾರರು ಕಳೆದ ಎರಡು ದಿನದಿಂದ ಆರಂಭಿಸಿದ್ದ ರಾಷ್ಟ್ರೀಯ ಹೆದ್ದಾರೆ ಬಂದ್ ನಿಲ್ಲಿಸಿ ಹುಬ್ಬಳ್ಳಿಯತ್ತ ಪಾದಯಾತ್ರೆ ಆರಂಭಿಸಿದ್ದಾರೆ.ಪ್ರತಿಭಟನೆಗೆ ದಿಂಗಾಲೇಶ್ವರ ಸ್ವಾಮಿಗಳು ಎಂಟ್ರಿ ಕೊಟ್ಟ ನಂತರ ಪ್ರತಿಭಟನೆಯ ದಿಕ್ಕು ಬದಲಾಗಿದ್ದು ಕೇಂದ್ರ ಸಚಿವರ ಮನೆಗೆ ಮುತ್ತಿಗೆ ಹಾಕಲು ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ.

ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಬೆಳಗಾವಿಯ ಹತ್ತರಗಿ ಟೋಲನಿಂದ ಹುಬ್ಬಳ್ಳಿ ಕಡೆಗೆ ಪಾದಯಾತ್ರೆ ಆರಂಭವಾಗಿದ್ದು..ಬೆಳಗಾವಿ ತಾಲೂಕಿನ ಕಾಕತಿವರೆಗೆ ಪಾದಯಾತ್ರೆ ನಡೆಸಿ ಮತ್ತೆ ಬೆಳಗ್ಗೆ ಪಾದಯಾತ್ರೆ ಆರಂಭವಾಗಲಿದೆ.ಮೂರು ನಾಲ್ಕು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ ಎಂದು ಶಶಿಕಾಂತ ಗುರೂಜಿ ಹೇಳಿದ್ದಾರೆ.

ಪಾದಯಾತ್ರೆ ಆರಂಭವಾಗುತ್ತಿದ್ದಂತೆ ಒಂದು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಓಪನ್ ಆಗಿದ್ದು ವಾಹನಗಳ ಸಂಚಾರಕ್ಕೆ‌ ರೈತರು ಅನುಕೂಲ ಮಾಡಿಕೊಟ್ಟಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author