ಮುಜರಾಯಿ ಇಲಾಖೆಯಿಂದ ಸಂಪೂರ್ಣ ಕೈ ತಪ್ಪಿತಾ ಅಂಜನಾದ್ರಿ ಬೆಟ್ಟ.. ಅಂಜನಾದ್ರಿ ದೇವಸ್ಥಾನ ಮೂಲ ಅರ್ಚಕ ವಿದ್ಯಾದಾಸ ಬಾಬಾ ತೆಕ್ಕೆಗೆ.

Share to all

ಮುಜರಾಯಿ ಇಲಾಖೆಯಿಂದ ಸಂಪೂರ್ಣ ಕೈ ತಪ್ಪಿತಾ ಅಂಜನಾದ್ರಿ ಬೆಟ್ಟ..
ಅಂಜನಾದ್ರಿ ದೇವಸ್ಥಾನ ಮೂಲ ಅರ್ಚಕ ವಿದ್ಯಾದಾಸ ಬಾಬಾ ತೆಕ್ಕೆಗೆ.

ಕೊಪ್ಪಳ:-ಹೌದು ಇದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿ ಹನಮನಹಳ್ಲಿ ಸಮೀಪವಿರು ಆಂಜನೇಯನ ಜನ್ಮಸ್ಥಳ ಎಂದೇ ಖ್ಯಾತಿ ಪಡೆದಿರುವ ಅಂಜನಾದ್ರಿ ಬೆಟ್ಟ.

ಧಾರ್ಮಿಕ ದತ್ತಿ ಇಲಾಖೆಯ ಅಧಿನದಲ್ಲಿದ್ದ ಈ ಹನುಮ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟ ಸದ್ಯ ಸರ್ಕಾರದ ಕೈತಪ್ಪಿದೆ. ಹೈಕೋರ್ಟ ಆದೇಶ ಹಿನ್ನೆಲೆ, ಅಂಜನಾದ್ರಿಯ ಮೂಲ ಅರ್ಚಕ ವಿದ್ಯಾದಾಸ ಬಾಬಾ ದೇವಸ್ಥಾ‌ನವನ್ನ ಕಬ್ಜಾ ಮಾಡಿಕೊಂಡಿದ್ದಾರೆ. ಆಡಳಿತ ಕಚೇರಿ ಸೇರಿ 8 ಕಟ್ಟಡಗಳಿಗೆ ವಿದ್ಯಾದಾಸ್ ಬಾಬಾ ಬೀಗ ಹಾಕಿದ್ದಾರೆ.

ಬೀಗ ಹಾಕಿರೋ ಆಡಳಿತ ಕಚೇರಿ, ಕೆಲಸ ಬಿಟ್ಟು ಬಂದು ಕೂತಿರೋ ದೇವಸ್ಥಾನದ ಸಿಬ್ಬಂದಿ, ಅವರೆಲ್ಲರನ್ನ ಕಾಯೋಕೆ ಪೊಲೀಸ್ ಸರ್ಪಗಾವಲು, ಇದೆಲ್ಲ ಅಂಜನಾದ್ರಿ ಆಂಜನೇಯಮ ದರ್ಶನಕ್ಕೆ ಬಂದಿದ್ದ ಹನುಮ ಭಕ್ತರಿಗೆ ಕಂಡು ಬಂದ ದೃಶ್ಯಗಳು. ಹೌದು ರಾಮಭಂಟ ಹನುಮನ ಜನ್ಮ ಸ್ಥಳ ಎಂದೆ ಖ್ಯಾತಿ ಪಡೆದ, ಗಂಗಾವತಿ ತಾಲೂಕಿನ ಅಂಜನಾದ್ರಿ ದೇವಸ್ಥಾನವನ್ನ ಮೂಲ ಅರ್ಚಕ ವಿದ್ಯಾದಾಸ್ ಬಾಬಾ ಕಬ್ಜಾ ಮಾಡಿಕೊಂಡಿದ್ದಾರೆ. ಅಕ್ಟೋಬರ್ 7 ರಂದು ಧಾರವಾಡ ಹೈಕೋರ್ಟ ಆದೇಶದ ಮೇರೆಗೆ, ಅಂಜನಾದ್ರಿಗೆ ಆಗಮಿಸಿರೋ ವಿದ್ಯಾದಾಸ ಬಾಬಾ, ಆಡಳಿತ ಕಚೇರಿ, ಅಡುಗೆ ಮನೆ, ಸಂಸ್ಕ್ರತ ಪಾಠ ಶಾಲೆ, ಸೇರಿ ಎಲ್ಲ ಕೊಠಡಿಗಳಿಗೂ ಬೀಗ ಹಾಕಿ, ದಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಗಳನ್ನ ಹೊರ ಕಳಿಸಿದ್ದಾರೆ. 2018 ರಲ್ಲಿ ದಾರ್ಮಿಕ ದತ್ತಿ ಇಲಾಖೆಗೆ ಅಂಜನಾದ್ರಿ ಬೆಟ್ಟ ಒಳಪಟ್ಟಿತ್ತು. ಆ ಬಳಿಕ ಸರ್ಕಾರದ ಆದೇಶವನ್ನ ಪ್ರಶ್ನಿಸಿ ಮೂಲ ಅರ್ಚಕ ವಿದ್ಯಾದಾಸ್ ಬಾಬಾ ಹೈಕೋರ್ಟ ಮೊರೆ ಹೋಗಿದ್ರು, ಬಳಿಕ ಸುಧೀರ್ಘ ವಿಚಾರಣೆ ಬಳಿಕ, ಹೈ ಕೋರ್ಟ ಜಿಲ್ಲಾಡಳಿತದ ಆದೇಶವನ್ನ ರದ್ದು ಮಾಡಿ, ವಿದ್ಯಾದಾಸ್ ಬಾಬಾಗೆ ಪೂಜೆ ನೆರವೇರಿಸಲು ಅವಕಾಶ ನೀಡಿದೆ. ಈ ಹಿನ್ನೆಲೆ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ,ಬಳಿಕ ದೇವಸ್ಥಾನದ ಆಡಳಿತ ಕಚೇರಿ ಸೇರಿ ಎಂಟು ಕೊಠಡಿಗಳಿಗೆ ಬೀಗ ಹಾಕಿದ್ದಾರೆ. ಸದ್ಯ ವಿದ್ಯಾದಾಸ ಬಾಬಾ ದೇವಸ್ಥಾನವನ್ನು ಅಧಿಕೃತವಾಗಿ ಕಬ್ಜಾ ಮಾಡಿಕೊಂಡಿದ್ದಾರೆ..

ಬೈಟ್ ೦೧: ವಿದ್ಯಾದಾಸ್ ಬಾಬಾ ( ಅಂಜನಾದ್ರಿ ಮೂಲ ಅರ್ಚಕ )

ಸದ್ಯ ಹೈಕೋರ್ಟ ಸೂಚನೆ ಮೇರೆಗೆ ವಿದ್ಯಾದಾಸ ಬಾಬಾ ದೇವಸ್ಥಾನದಲ್ಲಿ ಪೂಜೆಯನ್ನ ಮುಂದುವರೆಸಿದ್ದಾರೆ. ದೇವಸ್ಥಾನದ ಸ್ವಚ್ಚತೆ ಸೇರಿ ವಿವಿದ ಕಾರ್ಯಗಳಿಗೆ ಸಿಬ್ಬಂದಿಗಳನ್ನ ನೇಮಕ ಮಾಡಿದ್ದು, ಭಕ್ತರಿಗೆ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಪೊಲೀಸರು, ಬಂದೋಬಸ್ಥ ಒದಗಿಸಿದ್ದಾರೆ.
ಕೊಪ್ಪಳ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ, ವಿದ್ಯಾದಾಸ್ ಬಾಬಾ ದೇವಸ್ಥಾನ ತಮ್ಮ ಸುಪರ್ದಿಗೆ ತಗೆದುಕೊಂಡಿದ್ದು, ಜಿಲ್ಲಾಡಳಿತದ ಯಾವುದೆ ಅಧಿಕಾರಿಗಳು ದೇವಸ್ಥಾನಕ್ಕೆ ಬಂದಿಲ್ಲ, ದೇವಸ್ಥಾನದ ಸಿಬ್ಬಂದಿಗಳನ್ನ ಹೊರ ಕಳಿಸಿದ ಹಿನ್ನೆಲೆ, ವಿದ್ಯಾದಾಸ ಬಾಬಾ ಮೇಲೆ ಗಂಗಾವತಿ ತಹಸಿಲ್ದಾರ್ ದೇವಸ್ಥಾನದ ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೈಟ್ ೦೨ : ವಿದ್ಯಾದಾಸ್ ಬಾಬಾ ( ಅಂಜನಾದ್ರಿ ಮೂಲ ಅರ್ಚಕ )

ಸದ್ಯ ಹೈ ಕೋರ್ಟ್ ಆದೇಶದ ಮೇರೆಗೆ ವಿದ್ಯಾದಾಸ ಬಾಬಾ ದೇವಸ್ಥಾನವನ್ನ ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಇದರಿಂದ ದಾರ್ಮಿಕ ದತ್ತಿ ಇಲಾಖೆ ಹಾಗೂ ಜಿಲ್ಲಾಡಳಿತದ ಹಿಡಿತದಿಂದ ಅಂಜನಾದ್ರಿ ಆಂಜನೇಯ ದೇವಸ್ಥಾನ ಕೈ ತಪ್ಪಿದಂತಾಗಿದೆ.

ಉದಯ ವಾರ್ತೆ ನ್ಯೂಸ್ ಕನ್ನಡ ಕೊಪ್ಪಳ


Share to all

You May Also Like

More From Author