ಗಂಡ ಹೆಂಡಿರ ಮದ್ಯೆ ಕೂಸು ಸಾವು.ಇಬ್ಬರ ನಡುವಿನ ಜಗಳ ಮಗುವಿನ ಸಾವಿನಲ್ಲಿ ಅಂತ್ಯ.

Share to all

ಗಂಡ ಹೆಂಡಿರ ಮದ್ಯೆ ಕೂಸು ಸಾವು.ಇಬ್ಬರ ನಡುವಿನ ಜಗಳ ಮಗುವಿನ ಸಾವಿನಲ್ಲಿ ಅಂತ್ಯ.

ರಾಮನಗರ:-ಗಂಡ-ಹೆಂಡತಿ ಜಗಳ ಅಂದರೆ ಉಂಡು ಮಲಗುವ ತನಕ ಅಂತ ಗಾದೆ ಮಾತಿದೆ.ಆದರೆ ಅವರಿಬ್ಬರ ಜಗಳ ಮಗುವಿನ ಸಾವಿನಲ್ಲಿ ಅಂತ್ಯ ಕಂಡಿದೆ.

ಗಂಡನ ಜೊತೆ ಗಲಾಟೆ ಮಾಡಿಕೊಂಡ ಪತ್ನಿ ಸಿಟ್ಟಿನಲ್ಲಿ ಮಗುವಿಗೆ ವಿಷವುಣಿಸಿ, ತಾನೂ ವಿಷ ಸೇವಿಸಿದ್ದ ಮಹಿಳೆ
ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದರೆ ತಾಯಿ ಬದುಕುಳಿದಿದ್ದಾಳೆ.

ಹಾರೋಹಳ್ಳಿ ತಾಲೂಕಿನ ಗೋದೂರು ಗ್ರಾಮದಲ್ಲಿ ಘಟನೆ ನಡೆದಿದ್ದು
ಸೋಮಕುಮಾರ್ ಮತ್ತು ಪೂರ್ಣಿಮಾ ಎಂಬುವವರ ಮಗು ದೀಕ್ಷಿತ್ (3) ಸಾವನ್ನಪ್ಪಿದೆ.
ಸೋಮಕುಮಾರ್ ಮತ್ತು ಪೂರ್ಣಿಮಾ ದಂಪತಿ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ
ಗಲಾಟೆ ವಿಕೋಪಕ್ಕೆ ತಿರುಗಿ ಮಗುವಿಗೆ ಜಿರಳೆ ಔಷಧಿ ತಿನ್ನಿಸಿ ತಾನೂ ವಿಷ ಸೇವಿಸಿದ್ದಳು.
ಬಳಿಕ ಇಬ್ಬರನ್ನೂ ಕನಕಪುರದ ದಯಾನಂದ ಆಸ್ಪತ್ರೆಗೆ ರವಾನಿಸಿದ್ದ ಕುಟುಂಬಸ್ಥರು
ಚಿಕಿತ್ಸೆ ಫಲಿಸದೇ ಮಗು ದೀಕ್ಷಿತ್ ಸಾವನ್ನಪ್ಪಿದರೆ ತಾಯಿ ಪೂರ್ಣಿಮಾ ಬದುಕುಳಿದಿದ್ದಾಳೆ.

ಮೃತ ಮಗುವಿನ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು,
ಪ್ರಕರಣ ಸಂಬಂಧ ಹಾರೋಹಳ್ಳಿ ಠಾಣೆಯಲ್ಲಿ ಪರಸ್ಪರರ ವಿರುದ್ಧ ದೂರು ದಾಖಲಾಗಿದೆ.

ಉದಯ ವಾರ್ತೆ ರಾಮನಗರ


Share to all

You May Also Like

More From Author