ಹುಬ್ಬಳ್ಳಿ:-ಜಗದೀಶ್ ಶೆಟ್ಟರ್ ಅತಿ ವಿನಯಂ ಛೋರ ಲಕ್ಷ್ಮಣಂ ಹೆಸರಿಗೆ ಮಾತ್ರ ನೋಡಲು ವಿನಯವಂತರು,ಗುಣವಂತರು,ಶೀಲವಂತರು ಮಾಡೋ ಕೆಲಸವೆಲ್ಲಾ ನಂಬಿಕೆ ದ್ರೋಹಗಳು.ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ಸೆರ್ಪೇಡೆ ಬೆನ್ನಲ್ಲೇ ಕಾಂಗ್ರೇಸ್ ಪಕ್ಷದವರ ವಾಗ್ದಾಳಿ.ಕಾಂಗ್ರೇಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ವಾಗ್ದಾಳಿ ನಡೆಸಿದ್ದಾರೆ.
ಜಗದೀಶ್ ಶೆಟ್ಟರ್ ಅತಿ ವಿನಯಂ ಛೋರ ಲಕ್ಷಂ ಎಂದ ರಜತ್ ಉಳ್ಳಾಗಡ್ಡಿಮಠ ಹೇಳಿದ್ದಾರೆ.ಹೆಸರಿಗೆ ಮಾತ್ರ ಸರಳ ಸಂಭಾಯಿತರು.ಮಾಡೊ ಕೆಲಸಗಳೆಲ್ಲ ನಂಬಿಕೆ ದ್ರೋಹಗಳ ಕೆಲಸಗಳೇ.
ಅನ್ಯಾಯವಾದಾಗ ಕಾಂಗ್ರೇಸ್ ಪಕ್ಷಕ್ಕೆ ಬರಮಾಡಿಕೊಂಡು ಟಿಕೇಟ್ ನೀಡಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಈಗ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ.ಮತವನ್ನು ಹಾಕಿದವರೆಲ್ಲರಿಗೂ ನಂಬಿಕೆ ದ್ರೋಹ ಮಾಡಿದ್ದು ಸಿದ್ದಾರೂಢರ ಶಾಪ ಜಗದೀಶ್ ಶೆಟ್ಟರ್ ಗೆ ಆಗುತ್ತದೆ.
ಚೆನ್ನಮ್ಮನ ಸಂಸ್ಥಾನದಲ್ಲಿ ಯಾವ ವ್ಯಕ್ತಿ ಮದ್ದಿಗೆ ಸೆಗಣಿ ಕಲಿಸುವ ಕೆಲಸ ಮಾಡಿದ್ದಾರೋ ಹಾಗೇ ಜಗದೀಶ್ ಶೆಟ್ಟರ್ ಮಾಡಿದ್ದಾರೆಂದ ರಜತ್ ಉಳ್ಳಾಗಡ್ಡಿಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.