ಪಾಲಿಕೆಯಿಂದ ಮತ್ತೊಂದು ಟೆಕ್ನಾಲಜಿ ಅಪ್ಡೇಟ್..ಪೌರಕಾರ್ಮಿಕರಿಗೆ ಫೇಸ್ ಬಯೋಮೆಟ್ರಿಕ್ ಜಾರಿ..

Share to all

ಪಾಲಿಕೆಯಿಂದ ಮತ್ತೊಂದು ಟೆಕ್ನಾಲಜಿ ಅಪ್ಡೇಟ್..ಪೌರಕಾರ್ಮಿಕರಿಗೆ ಫೇಸ್ ಬಯೋಮೆಟ್ರಿಕ್ ಜಾರಿ..

ಹುಬ್ಬಳ್ಳಿ:-ಹೌದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಪ್ಡೇಟ್ ಆಗ್ತಾಯಿದೆ.ಕಸ ವಿಲೇವಾರಿಗಾಗಿ ಟೆಕ್ನಾಲಜಿ ಬಳಸಿಕೊಂಡು ಕಸ ಕಂಡಲ್ಲಿ ಫೋಟೋ ಕಳ್ಸಿ ಆರಂಭ ಮಾಡಿದ ನಂತರ ಈ ವಿನೂತನ ಅಭಿಯಾನವನ್ನು ಮತ್ತಷ್ಟು ಸಧೃಡಗೊಳಿಸಲು ಪೌರ ಕಾರ್ಮಿಕರ ಕಾರ್ಯ ಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಪೌರ ಕಾರ್ಮಿಕರಿಗೆ ಹೊಸ ಟೆಕ್ನಾಲಜಿಯ ಫೇಸ್​ ಬಯೋಮೆಟ್ರಿಕ್ ಜಾರಿಗೊಳಿಸುತ್ತಿದೆ.

ಪಾಲಿಕೆ ವ್ಯಾಪ್ತಿಯ 82 ವಾರ್ಡ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 2500ಕ್ಕೂ ಹೆಚ್ಚು ಪೌರ ಕಾರ್ಮಿಕರು ಹಾಗೂ ಆಟೋ ಟಿಪ್ಪರ್ ಚಾಲಕರ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಈ ವ್ಯವಸ್ಥೆ ಮಾಡಲಾಗಿದೆ..ಈ ಹೊಸ ವ್ಯವಸ್ಥೆಗೆ UIDAI ಯಿಂದ ಅಧಿಕೃತ ಅನುಮತಿ ಪಡೆಯಲಾಗಿದೆ.

ಇದರಿಂದ ಸಿಬ್ಬಂದಿಯ ನಿಖರ ಹಾಜರಿ ದಾಖಲೆ, ಸಮಯಕ್ಕೆ ಸರಿಯಾದ ವೇತನ ಪಾವತಿ, ಮತ್ತು ಆಡಳಿತಾತ್ಮಕ ಪಾರದರ್ಶಕತೆಯನ್ನು ಕಾಪಾಡಲು ಸಹಾಯವಾಗಲಿದೆ. ಈ ತರಹ ವಿನೂತನ ಮತ್ತು ಹೊಸ ಹೊಸ ಟೆಕ್ನಾಲಿಜಿಗಳನ್ನು ಬಳಸಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ ಅಂತಾ ಪಾಲಿಕೆಯ ಆಯುಕ್ತರಾದ ರುದ್ರೇಶ್ ಘಾಳಿ ಅವರು ತಿಳಿಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author